ನಂಜನಗೂಡು: ರಾತ್ರಿ ಸುರಿದ ಗಾಳಿ ಮಳೆಗೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹಾಕಿದ್ದ ಶಾಮಿಯಾನ ನೆಲಕಚ್ಚಿದೆ.
ಬಿಸಿಲು ಹೆಚ್ಚಾಗಿದ್ದರಿಂದ ಭಕ್ತರಿಗೆ ನೆರಳಿಗಾಗಿ ಹಾಕಿದ್ದ ಶಾಮಿಯಾನ ಹಾಕಲಾಗಿತ್ತು. ದೇವಸ್ಥಾನದ ಒಳಗಡೆ ತೆರಳಲು ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ಭಕ್ತರಿಗೆ ನೆರಳು ನೀಡಲು ಶಾಮಿಯಾನ ಅಳವಡಿಸಲಾಗಿತ್ತು.
ತಡರಾತ್ರಿ ಸುರಿದ ಗಾಳಿ ಮಳೆಗೆ ಶಾಮಿಯಾನ ನೆಲಕ್ಕುರುಳಿದೆ. ಇದೀಗ ಶಾಮಿಯಾನವನ್ನು ಸರಿಪಡಿಸಲು ಸಿಬ್ಬಂದಿಗಳು ನಿರತರಾಗಿದ್ದಾರೆ.

