ಮಡಿಕೇರಿ: ನ್ಯಾಯ ಒದಗಿಸುದರಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ನಂ.1 ಸ್ಥಾನದಲ್ಲಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರು ಸುರಕ್ಷಿತವಾಗಿ ಓಡಾಟ ನಡೆಸಲು ಇಡೀ ದೇಶದಲ್ಲೇ ಮೊದಲ ನಗರ ಯಾವುದು ಅಂದ್ರೆ ಬೆಂಗಳೂರು ಇದೆ. ಕರ್ನಾಟಕ ಪೊಲೀಸರು ನ್ಯಾಯ ಒದಗಿಸುವಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ವಿಪಕ್ಷದವರು ಸುಮ್ಮನೆ ಟೀಕೆ ಮಾಡ್ತಾರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾರೆ. ಏನ್ ಸರಿಯಿಲ್ಲ ಅಂತ ಅವರೇ ಹೇಳಬೇಕು. ಸುಖಾ ಸುಮ್ಮನೆ ಅಸಮರ್ಥ ಗೃಹ ಸಚಿವ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಆಸ್ತಿ ವಿಚಾರಕ್ಕೆ ತಂದೆ-ತಾಯಿ ಜೊತೆ ಜಗಳ ಆಡ್ತಾರೆ, ಅದಕ್ಕೆ ಪೊಲೀಸ್ ಇಲಾಖೆ ಸರಿ ಇಲ್ಲ ಅಂದ್ರೆ ಇವರ ಮನಸ್ಥಿತಿ ಹೇಗಿರಬೇಕು? ಪ್ರತಿಯೊಬ್ಬ ಪೊಲೀಸರು ಮಳೆ, ಗಾಳಿ, ಬಿಸಿಲೆನ್ನದೇ ಹಗಲು ರಾತ್ರಿ ದುಡಿಯುತ್ತಾರೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಇರಬೇಕು ಅಂತ ಕೆಲಸ ಮಾಡ್ತಾರೆ. ಅವರ ಆತ್ಮವಿಶ್ವಾಸ ಕಳೆಯಬೇಡಿ ಎಂದು ತಿಳಿ ಹೇಳಿದರು.

