ಯಾದಗಿರಿ: ಗಂಡ – ಹೆಂಡತಿ ಜಗಳ ಕೋಪದಲ್ಲಿ ಇಬ್ಬರು ಮಕ್ಕಳನ್ನು ತಂದೆ ಕಾಲುವೆಗೆ ಎಸೆದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಬಳಿಯ ಕಾಲುವೆಯಲ್ಲಿ ನಡೆದಿದೆ.

ಗಂಗನಾಳ್ ಗ್ರಾಮದ ಶಾಂತಪ್ಪ ಬಿರಾದಾರ್ ಎಂಬ ಪಾಪಿ ತಂದೆಯಿಂದ ದುಷ್ಕೃತ್ಯ ನಡೆದಿದೆ. ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಶಾಂತಪ್ಪ ಮನೆಯಿಂದ ಹೊರಟಿದ್ದರು.

ಸಾನ್ವಿ (9) ಹಾಗೂ ಸೃಜನ್ (2) ಸಾವಿಗೀಡಾದ ಇಬ್ಬರು ಮಕ್ಕಳು. ಮತ್ತೊಬ್ಬ ಮಗಳನ್ನು ತಾಯಿ ಆಶ್ರಯಕ್ಕೆ ಶಾಂತಪ್ಪ ಒಪ್ಪಿಸಿದ್ದರು. ಕೌಟುಂಬಿಕ ಕಲಹದಿಂದ ಇಬ್ಬರು ಮಕ್ಕಳನ್ನು ಮಕ್ಕಳನ್ನು ಎಸೆದಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಕಾಲುವೆಯಲ್ಲಿ ಮೃತಪಟ್ಟ ಮಕ್ಕಳಿಗಾಗಿ ತೀವ್ರ ಶೋಧ ಮಾಡಿ ಪೋಲಿಸರು ಶವ ಹೊರಗೆ ತೆಗೆದಿದ್ದಾರೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಗೋಗಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಸಿಪಿಐ ದೀಪಕ್ ಬೂಸರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.