ವಿಜಯಪುರ: ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರತ ನೌಕರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ನಡೆದಿದೆ.
51 ವರ್ಷದ ಯಲ್ಲಪ್ಪ ಗೋಪಾಲ್ ಭಜಂತ್ರಿ ಮೃತಪಟ್ಟ ಅಂಚೆ ಇಲಾಖೆ ನೌಕರರಾಗಿದ್ದಾರೆ. ಯಲ್ಲಪ್ಪ ಗೋಪಾಲ್ ಅವರು ಕಳೆದ 20 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಪ್ಯಾಕರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಇಂದು ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಘಾತ ಸಂಭವಿಸಿದೆ. ಅಂಚೆ ಕಚೇರಿಯಲ್ಲಿ ಯಲ್ಲಪ್ಪ ಕುಸಿದು ಬಿದ್ದು ಸಾವನ್ನಪ್ಪಿದ್ದು, ಸಹೋದ್ಯೋಗಿಗಳು ಬೆಚ್ಚಿ ಬಿದ್ದಿದ್ದಾರೆ.

