Bengaluru 24°C
Ad

ಹಂಪಿಯಲ್ಲಿ ಭಾರಿ ಮಳೆ : ನೆಲಕ್ಕರುಳಿದ ಅರಸರ ಕಾಲದ ಕಲ್ಲಿನ ಮಂಟಪ

ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಹಂಪಿ ಸಾರಿ ಹೇಳುತ್ತದೆ. ಯುನೆಸ್ಕೋ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಹಂಪಿ ಸಾರಿ ಹೇಳುತ್ತದೆ. ಯುನೆಸ್ಕೋ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.

ಇವು ಪಂಪಾ ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತಿವೆ. ಹೀಗಾಗಿಯೇ ಇವುಗಳನ್ನು ನೋಡಲು ವಿದೇಶಗಳಿಂದ ಜನ ಆಗಮಿಸುತ್ತಾರೆ. ಇವು ಮೊದಲೇ ಶಿಥಿಲವಾಗಿದ್ದು, ದುರಸ್ತಿಯ ಅಗತ್ಯದಲ್ಲಿದ್ದವು.ಆದರೆ ಪುರಾತತತ್ವ ಇಲಾಖೆ ಇವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಸ್ಮಾರಕಗಳ ರಕ್ಷಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಬರುತ್ತಿದ್ದರೂ, ಕೇಂದ್ರ ಪುರಾತತ್ವ ಇಲಾಖೆ ಇವುಗಳ ಸ್ಥಿತಿಗತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.

Ad
Ad
Nk Channel Final 21 09 2023
Ad