ಉತ್ತರ ಕನ್ನಡ : ಶಿರಸಿ ತಾಲೂಕಿನ ಬಳಗೇರಿ ಸರಗುಪ್ಪಾದಲ್ಲಿ ಜ.09 ರಂದು 18-00 ಗಂಟೆಯಿಂದ ಜ.10 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಬಳಗೇರಿ ಗ್ರಾಮದ ನಿವಾಸಿ ರಾಮಚಂದ್ರ ತಂದೆ ನರಸಿಂಹ ಗೌಡ ಮತ್ತು ಅವರ ಸಹೋದರರ ಹೊಲದಲ್ಲಿರುವ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಮತ್ತು ಮೂರು ಹೊರಿಗಳನ್ನು ಕಳ್ಳತನ ಮಾಡಲಾಗಿದೆ.

ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮಾನ್ಯ ಪೊಲೀಸ ಅಧೀಕ್ಷಕರವರ ಸೂಚನೆಯಂತೆ ಮೂರು ತಂಡಗಳನ್ನು ರಚಿಸಿ ಪತ್ತೆ ಕಾರ್ಯ ನಡೆಸಲಾಗುತ್ತಿತ್ತು.

ನಿನ್ನೆ ಪ್ರಕರಣದಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡುವ ಒಟ್ಟು 06 ಜನರ ಗ್ಯಾಂಗ್‌ನ್ನುಪತ್ತೆ ಮಾಡಲಾಗಿದೆ. ಮೋಹನ (25), ಬಸವರಾಜ (39), ಅವಿನಾಶ @ ಅಫೀಲಾಷ (22), ಸುರೇಶ (38) ಬಸವರಾಜ (47) ಅಯೂಬ (54 ) ಎಂದು ತಿಳಿದು ಬಂದಿದೆ.

ದಸ್ತಗಿರಿ ಮಾಡಿ ಅವರಿಂದ 03 ಜಾಮನಾರಗಳನ್ನು ರಕ್ಷಿಸಿದ್ದು, ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಸುಮಾರು ರೂ 3 ಲಕ್ಷ ಬೆಲೆಬಾಳುವ ಮಹಿಂದ್ರಾ ಪಿಕ್ ಅಪ್ ವಾಹನ ಮತ್ತು ಒಂದು ಮೋಟಾರ್ ಸೈಕಲನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ 04 ಜನ ಆರೋಪಿತರು ಇದ್ದು ಅವರನ್ನು ಶೀಘ್ರವಾಗಿ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಈ ಪ್ರಕರಣವನ್ನು ಪತ್ತೆ ಮಾಡಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್ ಎಂ.ಎನ್. ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ. ಕೃಷ್ಣಮೂರ್ತಿ, ಕೆ.ಎಸ್.ಪಿ.ಎಸ್. ಶ್ರೀ ಜಗದೀಶ ಎಂ. ಕೆ.ಎಸ್.ಪಿ.ಎಸ್ ಶ್ರೀಮತಿ ಗೀತಾ ಪಾಟೀಲ್, ಡಿ.ವೈ.ಎಸ್.ಪಿ. ಶಿರಸಿ ಉಪ ವಿಭಾಗ, ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಮೇಶ ಶಂ ಹೂಗಾರ ಪೊಲೀಸ್ ನಿರೀಕ್ಷಕರು,

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ, ಇವರ ನೇತೃತ್ವದಲ್ಲಿ ಶ್ರೀ ಸಂತೋಷಕುಮಾರ ಎಮ್. ಪಿ.ಎಸ್.ಐ. (ಕಾ.ಸು.) ಶ್ರೀ ಅಶೋಕ ಆರ್ ರಾಠೋಡ, ಪಿ.ಎಸ್.ಎ (ತನಿಖೆ) ಹಾಗೂ ಎ.ಎಸ್.ಐ ರವರಾದ ಶ್ರೀ ಸಂತೋಷ ಕಮಟಗೇರಿ, ಶ್ರೀ ಪ್ರದೀಪ 8, ರೇವಣಕರ ಎ.ಎಸ್.ಐ ಮತ್ತು ಸಿಬ್ಬಂದಿಯವರಾದ ದಾವಲ್ ಸಾಬ್ ಕುಂಠಿ, ಮಹಮದ್ ಶಪೀ ಶೇಖ, ಅರುಣ ಕುಮಾರ, ಮೌಲಾಲಿ ಮರಗ, ಸಂತೋಷ ಶೆಟ್ಟಿ, ಗಜಾನನ ಗಾಂವಕರ, ಮಹಾದೇವ ನಾಯ್ಕ, ಮಂಜುನಾಥ ಸೂಜಾರಿ, ವೆಂಕಟರಮಣ ನಾಯ್ಕ, ರಾಘವೇಂದ್ರ ಅಂತೋಜ,

ರೋನಾಲ್ಡ್ ಅಡಾ, ಗವಿಗಪ್ಪ ಚಕ್ರಸಾಲಿ, ಮಾರುತಿ ಗೌಡ, ಮಹಿಳಾ ಸಿಬ್ಬಂದಿಯವರಾದ ಕು. ಮಧುರಾ, ಐಶ್ವರ್ಯ, ಮತ್ತು ಶ್ರೀಮತಿ ಸಜೀನಾ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗಾ, ಬಟನ್ ಕದಂ, ನೇಯವರುಗಳ ಸಹಾಯನಿಂದ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕರಣವನ್ನು ಪತ್ತೆ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್.ಎಂ.ಎನ್. ಎ.ಪಿ.ಎಸ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.