ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಸಿಲ್ಹೆಟ್ ಜಿಲ್ಲೆಯ ಗೋವೈನ್‌ಘಾಟ್ ಉಪಜಿಲ್ಲಾದಲ್ಲಿ ಹಿಂದೂ ಶಿಕ್ಷಕರೊಬ್ಬರ ಮನೆಗೆ ಬೆಂಕಿ ಹಚ್ಚಲಾಗಿದೆ.
ಶಾಲಾ ಶಿಕ್ಷಕ ಬೀರೇಂದ್ರ ಕುಮಾರ್ ಡೇ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಕುಟುಂಬ ಮತ್ತು ಹತ್ತಿರದ ನಿವಾಸಿಗಳಲ್ಲಿ ಭಯ ಹುಟ್ಟುಹಾಕಿದೆ. ನಂದಿರ್‌ಗಾಂವ್ ಒಕ್ಕೂಟದ ಬಹೋರ್ ಗ್ರಾಮದಲ್ಲಿ ಇಸ್ಲಾಮಿಸ್ಟ್ ಗುಂಪುಗಳು ಈ ಕೃತ್ಯ ಎಸಗಿವೆ ಎಂದು ಆರೋಪಿಸಲಾಗಿದೆ.
ಇದು 24 ದಿನಗಳಲ್ಲಿ ಒಂಬತ್ತನೇ ಘಟನೆಯಾಗಿದ್ದು, ಬಾಂಗ್ಲಾದೇಶದಾದ್ಯಂತ ಹಿಂದೂ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ.

