ಮೈಸೂರು: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎನ್.ಆರ್.ಠಾಣೆ ಪೊಲೀಸರು ಮೂವರು ಯುವಕರನ್ನ ಬಂಧಿಸಿ ಕಂಬಿ ಎಣಿಸಲು ಕಳಿಸಿದ್ದಾರೆ.
ಕುರಿಮಂಡಿ ನಿವಾಸಿಗಳಾದ ಕಾರ್ತಿಕ್(24), ಭರತ್ (25) ಹಾಗೂ ರವಿ (29) ಬಂಧಿತರು. ಎನ್.ಆರ್.ಮೊಹಲ್ಲಾ ನಾರ್ಥ್ ಈಸ್ಟ್ ರಸ್ತೆಯ ಡ್ರೀಮ್ ಕಾಟನ್ ಶಾಪ್ ಬಳಿ ಪೊಲೀಸ್ ಪೇದೆಯೊಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮೂವರು ಯುವಕರು ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು.
ಈ ಹಿನ್ನಲೆ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

