ಉಡುಪಿ: ಹೆಜಮಾಡಿ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನು ಬಂದಿದ್ದು, ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತೀರ ಪ್ರದೇಶಕ್ಕೆ ಲಕ್ಷಾಂತರ ಮೀನು ಬಂದಿದೆ.
ಕೈರಂಪಣಿ ಬಲೆ ಬೀಸಿದ ವೇಳೆ ತೀರ ಪ್ರದೇಶಕ್ಕೆ ಮೀನುಗಳು ಜಿಗಿದಿದೆ. ಕಡಲ ತೀರದ ನಿವಾಸಿಗಳಿಗೆ ಭೂತಾಯಿ ಮೀನಿನ ಸುಗ್ಗಿಯಾಗಿದೆ. ಕೈಗೆ ಸಿಕ್ಕಿದಷ್ಟು ಮೀನುನನ್ನು ತೀರದ ನಿವಾಸಿಗಳು ಹಿಡಿದು ಹೋಗಿದ್ದಾರೆ.
ಬೇರೆಲ್ಲ ಮೀನು ದುಬಾರಿಯಾಗಿದ್ದು, ಬೂತಾಯಿ ಮೀನು ಹೇರಳ ಲಭ್ಯವಾಗಿದೆ. ಬೂತಾಯಿ ಮೀನು ತೀರ ಪ್ರದೇಶದಲ್ಲಿ ಜಿಗಿಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ.

