ಉಡುಪಿ: ಕಾಂಗ್ರೆಸ್ ಶಾಸಕರ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರದು ಎಷ್ಟು ದಾಖಲೆಯ ಬಜೆಟ್ ದಾಖಲೆಗೆ ಯಾರು ಅಡ್ಡಿ ಮಾಡುತ್ತಾರೆ ಕಾಂಗ್ರೆಸ್ ತೀರ್ಮಾನ ಮಾಡಬೇಕು. ಕುರ್ಚಿಯ ಕಾದಾಟಕ್ಕೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ ಎಂದರು.

ಬಜೆಟ್ ಸಂಪೂರ್ಣ ಬಹುಮತದಿಂದ ಪಾಸ್ ಆಗುತ್ತೋ ಗೊತ್ತಿಲ್ಲ. ಬಜೆಟ್ ಸಂದರ್ಭದಲ್ಲಿ ಶಾಸಕರು ಡೆಲ್ಲಿಗೆ ಹೋಗ್ತಾರಾ, ವಿದೇಶಕ್ಕೆ ಹೋದವರಿಗೆ ಬರಬೇಡಿ ಎಂದು ಕರೆ ನೀಡುತ್ತಾರಾ, ಬಜೆಟ್ ಸಂಪೂರ್ಣ ಬಹುಮತದೊಂದಿಗೆ ಪಾಸ್ ಆಗುತ್ತಾ ಎಂದು ಸಿಎಂ ಖಚಿತ ಮಾಡಿಕೊಳ್ಳಲಿ ಎಂದರು.

ಬಜೆಟ್ ಬಗ್ಗೆ ನಮಗೆ ಯಾವುದೇ ನಿರೀಕ್ಷೆಯಿಲ್ಲ. ನೀರಿನ ಮೇಲಿನ ಗುಳ್ಳೆ ಯಂತಹ ಬಜೆಟ್, ನೀರಿನ ಮೇಲೆ ಪೇಪರ್ ದೋಣಿ ಹೋದಾಗ ಎಷ್ಟು ದೂರ ಸಾಗುತ್ತೋ ಅಷ್ಟೇ ಅನುದಾನ ಈ ರಾಜ್ಯ ಸರಕಾರದಿಂದ ಸಿಗುವುದು. ಮೂರು ವರ್ಷದಲ್ಲಿ ಯಾವ ಅನುದಾನ ಯಾವ ಜಿಲ್ಲೆಗೂ ಸಿಕ್ಕಿಲ್ಲ. ಸಂಪೂರ್ಣ ಅಭಿವೃದ್ಧಿಯನ್ನು ಸರ್ಕಾರ ಮರೆತಿದೆ. ಎರಡು ವರ್ಷದಲ್ಲಿ ಘೋಷಣೆಯಾದ ಫಿಫ್ಟಿ ಪರ್ಸೆಂಟ್ ಕೂಡ ಜಾರಿಯಾಗಿಲ್ಲ. ಸರಕಾರದ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂದರು.

ಪಶ್ಚಿಮ ವಾಹಿನಿಗೆ ಹಿಂದಿನ ಎಲ್ಲಾ ಸರ್ಕಾರಗಳು 500 ಕೋಟಿ ಅನುದಾನ ಕೊಡುತ್ತಿತ್ತು. ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ಬೇಕು. ಉಡುಪಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕು ಎಂದರು.