ಉಡುಪಿ: ಹಿರಿಯೂರು ಉಪ ಚುನಾವಣಾ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಲ್ಲಿ ನಿಲ್ಲಲು ಯಾವ ಗೊಂದಲಕ್ಕೆ ಅವಕಾಶ ಕೊಡಲ್ಲ. ನಮ್ಮ ಪಕ್ಷದ 40000 ಮತ ಇದೆ. ಇಲ್ಲಿ ಗೊಂದಲ ಇಲ್ಲ ತಾಳ್ಮೆ ಇದೆ ತಾಳ್ಮೆಯಲ್ಲಿದ್ದೆನೆ. ನಮ್ಮ ಪಕ್ಷ ಪ್ರಾದೇಶಿಕ ಪಕ್ಷ ಎಂದರು.
ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿ, 2023ಕ್ಕೆ ಯಾವುದಕ್ಕೆ ಬಂತು ತನಿಖೆ ನಡೆಯುತ್ತಿದೆ ಮುಂದೆ ಏನಾಗುತ್ತೆ ನೋಡೊಣ. ಮುಖ್ಯಮಂತ್ರಿ ಸ್ಥಾನ ನಾನು ಎರಡು ಬಾರಿ ಆಗಿರುವುದು ಮುಂದೆ ಆದ್ರು ಆಗುತ್ತನೆ. ರಾಜ್ಯ ಆಡಳಿತ ಸಂಪೂರ್ಣ ಹದೆಗೆಟ್ಟಿದೆ. ಅಧಿಕಾರ ವರ್ಗಾವಣೆಯಲಿ ಹಣ ಓಡಾಡುತ್ತಿದೆ.
ಸರ್ಕಾರದಲ್ಲಿ ದುಡ್ಡಿಲ್ಲ, ಎಲ್ಲರೂ ಕಾಲಿ ಮಾಡಿದ್ದಾರೆ. ಕೆಟ್ಟ ಆಡಳಿತ ನನಗೆ ಬೇಕಾಗಿಲ್ಲ. ರಾಜ್ಯ ಉಳಿಸಬೇಕಾಗುವುದು ನನ್ನ ಮುಖ್ಯ ಉದ್ದೇಶ ಎಂದರು.

