ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದರು. ಬಹಳ ವರ್ಷದ ಬಳಿಕ ಉಡುಪಿಯಲ್ಲಿ ನಿಮ್ಮೊಂದಿಗೆ ಮಾತನಾಡುತ್ತಿದ್ಧೇನೆ. ಕರಾವಳಿ ಎಂದರೆ ಅದು ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳ ಸಂಗಮ. ನಮ್ಮ ಕುಟುಂಬ ದೇವರನ್ನೆ ನಂಬಿಕೊಂಡಿರುವ ಕುಟುಂಬ. ಹೀಗಾಗಿ ನಾಡಿಗೆ ಬಂದಿರುವ ಸಂಕಷ್ಟ, ಬರಗಾಲ ಪರಿಹರಿಸುವ ಸಲುವಾಗಿ ಪೂಜೆ ಸಲ್ಲಿಸಿದ್ದೇನೆ ಎಂದರು.

ರಾಜ್ಯದಲ್ಲಿರುವ ಸರಕಾರ 3ವರೆ ವರ್ಷ ಪೂರ್ಣಗೊಳಿಸಿದೆ, ಸಾಧನೆಗಳನ್ನು ಚರ್ಚೆ ಮಾಡಲು ಯಾವುದೇ ವಿಚಾರಗಳಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು 5 ಗ್ಯಾರಂಟಿ ತಂದು ರಾಜ್ಯಕ್ಕೆ ನೀಡಿದ್ದಾರೆ. 5 ಗ್ಯಾರಂಟಿ ನೀಡಲು ರಾಜ್ಯ ಸರಕಾರದ ಕೊಡುಗೆ ಏನು ? ಈ ಹೊರೆ ಯಾರ ಮೇಲೆ ಹಾಕುತ್ತಿದ್ದಾರೆ. ರಾಜ್ಯದ ಜನರು ದುಡಿಮೆಯಿಂದ ರಾಜ್ಯದ ಖಜಾನೆಗೆ ತೆರಿಗೆ ಮೂಲಕ ತುಂಬಿಸುತ್ತಾರೆ. ಹಾಗಾಗಿ ಜನರ ಕೊಡುಗೆ ದೊಡ್ಡದು,ರಾಜ್ಯದ ಸಿಎಂ ಡಿಸಿಎಂ ಕೊಡುಗೆ ಏನಿಲ್ಲಾ ಎಂದರು.

ಹಲವಾರು ಸೆಕ್ಟರ್ ಗಳ ತೆರಿಗೆ ಹೆಚ್ಚಿಸಿ ಹಣ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದ ಜನರ ಹಣ ದುರ್ಬಳಕೆಯಾಗುತ್ತಿದೆ. ಕರಾವಳಿಯಲ್ಲಿ ನಡೆದ ಕ್ಯಾಬಿನೆಟ್ ನಲ್ಲಿ 35 ಸಾವಿರ ಕೋಟಿ ಅನುದಾನ ನೀಡುವ ಘೋಷಣೆ ಮಾಡಲಾಗಿತ್ತು. ಈ ಘೋಷಣೆಯಾಗಿ 2 3 ತಿಂಗಳುಗಳು ಕಳೆದಿದೆ ಆದರೆ ಹಣ ಎಲ್ಲಿದೆ ?. ಕರಾವಳಿಯ ಜನತೆಗೆ ಘೋಷಣೆ ಯ ಮೂಲಕ ತೃಪ್ತಿ ಪಡಿಸಲು ಯೋಚಿಸಿದಲ್ಲಿ ಪ್ರಾಯಶ್ಚಿತ್ತಕ್ಕೆ ಕಾಂಗ್ರೆಸ್ ಸಿದ್ಧವಾಗಿರಬೇಕು.

ಕುಮಾರ ಸ್ವಾಮಿಗೆ ಹೊಟ್ಟೆ ಉರಿ, ಸುಳ್ಳೆ ಮನೆ ದೇವರು ಎಂದು ಕಾಂಗ್ರೆಸ್ ಹೇಳುತ್ತಾ ಬಂದಿದೆ. ಆದರೆ ಸುಳ್ಳು, ಮೋಸ ರಾಜ್ಯ ಸರಕಾರ ಜನತೆ ಗೆ ಮಾಡುತ್ತೀದೆ. ಬರಗಾಲದಿಂದ ರೈತರಿಗೆ ಬಿತ್ತನೆ ಬೀಜ ಸಮಸ್ಯೆಯಿಂದ ರಾಜ್ಯಕ್ಕೆ 62ಸಾವಿರ ಕೋಟಿ ನಷ್ಟ. ನಷ್ಟದ ಹಣವನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಮನವಿ ಮಾಡಿದೆ ಎಂದರು.

29ಕೋಟಿ‌ ಹಣ ಹಾಸನಾಂಬೆ ದೇವಳದ ಮೂಲಕ ಸಂಗ್ರಹವಾಗಿದೆ. 2025 ಕ್ಕೆ 35% ಏರಿಕೆ ಬಸ್ ದರ ಮಾಡಿದ್ದೀರಿ, ಈಗ 45% ಏರಿಕೆ ಮಾಡಲಾಗಿದೆ. 40 ಸಾವಿರ ಕೋಟಿ ಅಬಕಾರಿ ಇಲಾಖೆಯಿಂದ ತೆಗೆಯಲಾಗುತ್ತದೆ. 5 ಗ್ಯಾರಂಟಿಗೆ ನನ್ನ ವಿರೋಧವಿಲ್ಲಾ, ಆದರೆ ಅಭಿವೃದ್ಧಿ ಸ್ಥಗಿತಗೊಳಿಸಿ ಜನರ ಬದುಕು ಎಲ್ಲಿಯೇ ತೆಗೆದುಕೊಂಡು ಹೋಗುತ್ತೀದ್ದೀರಿ. ಭಾರತ ಜೋಡೋ ವಿಚಾರದಲ್ಲಿ ಇರುವ ಕಾಳಜಿ ರೈತರ ಮೇಲಿಲ್ಲಾ ಎಂದರು.

ಕಬ್ಬು ಬೆಳೆಗಾರರಿಗೆ ಹೋರಾಟದ ಬಳಿಕವೂ ಯಾವುದೇ ಪ್ರಯೋಜನೆವಾಗಿಲ್ಲಾ. ಇದುವರೆಗೂ ಕಬ್ಬು ಬೆಳೆಗಾರರ ನೆರವಿಗೆ ಈ ಸರಕಾರ ಬಂದಿಲ್ಲ. ಸರಿಯಾದ ನೀರು ಹಂಚಿಕೆಯಾಗದೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ. ಸಕ್ಕರೆ ಕಾರ್ಖಾನೆ ಯ ಕೆಲವು ಮಾಲಕರು ಹೆಲಿಕ್ಯಾಪ್ಟರ್ ನಲ್ಲಿ ತಿರುಗುತ್ತಿದ್ದಾರೆ. ನಷ್ಟ ಆಗುತ್ತಿದ್ದಾರೆ ಇದು ಸಾಧ್ಯಾವಾ…?. ರಾಜ್ಯದ ಜನತೆಯ ದಡಿಮೆಯ ತೆರಿಗೆ ರಾಜ್ಯದ ಖಜಾನೆ ತುಂಬಿಸುತ್ತಿದ್ದಾರೆ. ಐದು ಗ್ಯಾರಂಟಿ ಕೊಡುಗೆ ದೊಡ್ಡದಾಗಿದೆ. ಮೂರುವರೆ ವರ್ಷದ ಕೊಡುಗೆ ಎನಿದೆ. ಪುನಃ ಪುನಃ ತೆರಿಗೆ ಹೆಚ್ಚಿಸಿ ಜನರ ಹಣವನ್ನು ಗ್ಯಾರಂಟಿ ಯೋಜನೆ ಮೂಲಕ ವಸೂಲಿ ಮಾಡುತ್ತಿದ್ದಾರೆ.

ಕರಾವಳಿ ಭಾಗಕ್ಕೆ ಬಂದ್ರು ಅವರ ಘೋಷಣೆ ಕೇಳಿ ರಾಜ್ಯ ಸರ್ಕಾರ ಆಕಾಶವನ್ನೆ ಅವರ ಕೈಗೆ ಕೊಡುವ ಹಾಗಾಗಾಗಿದೆ. ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಹಲವಾರು ಸಮಸ್ಯೆ ಎನಾಯ್ತು. ಹಣ ಎಲ್ಲಿಟ್ಟಿದ್ದಾರೆ 32ಕೋಟಿ ಹಲವಾರು ಹಣವಿದೆ ಎಂದು ಹೇಳುತ್ತಿದ್ದಾರೆ. ದುಡ್ಡು ಎಲ್ಲಿದೆ ಘೋಷಣೆ ಮ‌ೂಲಕ ತೃಪ್ತಿ ಪಡಿಸಿದರೆ ಕಾಂಗ್ರೆಸ್ ಪಕ್ಷ ದೊಡ್ಡ ಆಘಾತ ಎದುರಿಸಬೇಕಾಗುತ್ತದೆ ಎಂದರು.