ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾರೆ.
ಮೂಕಾಂಬಿಕೆ ದೇವಿಯ ದರ್ಶನ ಪಡೆದು, ದೇವಾಲಯವನ್ನು ವೀಕ್ಷಿಸಿದರು. ಬಳಿಕ ದೇವಾಲಯದ ಮುಂಭಾಗದ ಗರುಡಗಂಭದ ಮುಂದೆ ದೇವಾಲಯದ ಅರ್ಚಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ದೇವಾಲಯದ ಆಡಳಿತ ಮಂಡಳಿಯಿಂದ ಸಚಿವೆಗೆ ಗೌರವಿಸಲಾಯಿತು.

