ಉಡುಪಿ: ಬಳ್ಳಾರಿಯಿಂದ ಕಬ್ಬಿಣದ ಪೈಪುಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯು ನಿಯಂತ್ರಣ ತಪ್ಪಿ ಮಾಳ ಘಾಟಿಯಲ್ಲಿ ಅಡ್ಡ ಬಿದ್ದು ಅಪಘಾತ ಸಂಭವಿಸಿದೆ.

ಫೆ. 23 ರಂದು ಬೆಳಗಿನ ಜಾವ 03:45 ಗಂಟೆಯಲ್ಲಿ 112 ಸಹಾಯವಾಣಿಗೆ ಕರೆ ಬಂದಂತೆ ಮಾಳ ಘಾಟಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಲಾರಿ ಚಾಲಕ ಸುಹೇಲ್ ಹಾಗೂ ಸಹಾಯಕ ರೋಷನ್ ಗಾಯಗಳಿಂದ ಆಘಾತಗೊಂಡಿದ್ದರು.

ERV-05 ವಾಹನದ Responder -ಶ್ರೀನಿವಾಸ್ Driver -ಗಿರಿಧರ್ ಪೈ ರವರು ಗಾಯಾಳುಗಳನ್ನು ಸ್ಥಳೀಯ ಆಂಬುಲೆನ್ಸ್ ಗಳಿಂದ ಕಾರ್ಕಳ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಇಬ್ಬರೂ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ.