ಉಡುಪಿ: ವಿಜಯದಾಸರ ಆರಾಧನೆಯ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಗುರುವಾರ ಗ್ರಂಥ ಹಾಗೂ ಭಾವಚಿತ್ರಗಳ ಮೆರವಣಿಗೆ ನಡೆಯಿತು.
ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆದ ಮೆರವಣಿಗೆಯಲ್ಲಿ ಶ್ರೀಪಾದರು ಗ್ರಂಥ ಹಾಗೂ ಭಾವಚಿತ್ರಗಳಿಗೆ ಆರತಿ ಬೆಳಗಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರ ಸುದರ್ಶನ ಆಚಾರ್ಯ ಕಾಪು, ಮಠದ ಸಿಬ್ಬಂದಿ ವರ್ಗದವರು ಹಾಗೂ ಭಕ್ತರು ಉಪಸ್ಥಿತರಿದ್ದರು.

