ಮಂಗಳೂರು : ಶಿವಸೇನಾ ಮಂಗಳೂರು ಆಶ್ರಯದಲ್ಲಿ ಹಾಗೂ ದತ್ತ ಭಕ್ತರ ಸಹಯೋಗದೊಂದಿಗೆ 8ನೇ ವರ್ಷದ ದತ್ತ ದೀಪೋತ್ಸವವು ನಗರದ ಪಿ.ವಿ.ಎಸ್. ಸರ್ಕಲ್ನಲ್ಲಿರುವ ಶ್ರೀ ಲಕ್ಷ್ಮೀನಾರಾಯಣೀ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಶಿವಸೇನಾ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಶ್ರೀ ಆನಂದ್ ಶೆಟ್ಟಿ ಅಡ್ಯಾರ್ ಅವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಈಶ ವಿಠಲದಾಸ ಸ್ವಾಮೀಜಿ, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅಶೋಕ್ ಶೇಟ್ ಭಟ್, ಪ್ರಸನ್ನ ರವಿ, ದಿನಕರ್ ಶೆಟ್ಟಿ, ಅರುಣ್ ಕದ್ರಿ, ಉಲ್ಲಾಸ್, ದಿನೇಶ್ ಉರ್ವ ಸೇರಿದಂತೆ ಹಲವು ಗಣ್ಯರು ಹಾಗೂ ದತ್ತ ಭಕ್ತರು ಉಪಸ್ಥಿತರಿದ್ದರು.
ಗಣ್ಯರು ದೀಪ ಬೆಳಗಿಸುವ ಮೂಲಕ 8ನೇ ವರ್ಷದ ದತ್ತ ದೀಪೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ದೀಪಗಳನ್ನು ಬೆಳಗಿಸಲಾಗಿದ್ದು, ದೀಪಗಳ ಬೆಳಕಿನಲ್ಲಿ ಶ್ರೀ ಲಕ್ಷ್ಮೀನಾರಾಯಣೀ ದೇವಸ್ಥಾನದ ಆವರಣವು ಕಂಗೊಳಿಸಿತು. ಭಕ್ತಿಭಾವ ಮತ್ತು ಧಾರ್ಮಿಕ ಸಂಭ್ರಮದೊಂದಿಗೆ ದತ್ತ ದೀಪೋತ್ಸವ ನೆರವೇರಿತು.

