Bengaluru 22°C
Ad

ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ ಪ್ರಕರಣ : ಮೃತರ ಸಂಖ್ಯೆ 6ಕ್ಕೆ ಏರಿಕೆ

ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ವಾಂತಿ ಬೇಧಿಯಿಂದ ಅಸ್ವಸ್ಥಗೊಂಡವರಲ್ಲಿ ಇದೀಗ ಮತ್ತೆ ಎರಡು ಮಂದಿ ಸಾವನಪ್ಪಿದ್ದು ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ತುಮಕೂರು : ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ವಾಂತಿ ಬೇಧಿಯಿಂದ ಅಸ್ವಸ್ಥಗೊಂಡವರಲ್ಲಿ ಇದೀಗ ಮತ್ತೆ ಎರಡು ಮಂದಿ ಸಾವನಪ್ಪಿದ್ದು ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಚಿಕ್ಕದಾಸಪ್ಪ(76), ಪೆದ್ದಣ್ಣ(72) ಮೃತಪಟ್ಟಿದ್ದರು. ಅಸ್ತಮಾದಿಂದ ಹನುಮಕ್ಕ(80), ಮನೆಯಲ್ಲೇ ನಿಂಗಮ್ಮ(75), ಮದ್ಯವ್ಯಸನಿಯಾಗಿದ್ದ 75 ವರ್ಷದ ನಾಗಪ್ಪ, ಮನೆಯಲ್ಲೇ ವಾಂತಿ ಭೇದಿಯಾಗಿ ಮೀನಾಕ್ಷಿ(3) ಮೃತಪಟ್ಟಿದ್ದಾರೆ. ಆ ಮೂಲಕ 6 ಜನರ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಘಟನೆ ಬಳಿಕ ಎಚ್ಚತ್ತ ಚಿನ್ನೆನಹಳ್ಳಿ ಗ್ರಾಮದಲ್ಲಿ ಡಿಸಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಪ್ರಭು ಎಡಿಸಿ ಶಿವಾನಂದ ಕರಾಳೆ ಎಸಿರಿಂದ ಗ್ರಾಮದ ಸರ್ಕಾರಿ ಶಾಲೆ ಬಳಿ ಸಭೆ ಮಾಡಿದ್ದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

Ad
Ad
Nk Channel Final 21 09 2023
Ad