Ad

ದರ್ಶನ್ ಗೆ ಬಿರಿಯಾನಿ ಕೊಟ್ಟಿಲ್ಲ,ಸಿಬ್ಬಂದಿಗಳಿಗೆ ತರಿಸಿದ್ದು : ನಿರ್ಮಾಪಕ ಕುಮಾರ ನಾಯ್ಕ್

ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ತೂಗುದೀಪ್ ಬಂಧನವಾಗಿದೆ. ಖಾಕಿ ವಶದಲ್ಲಿರುವ ಇರುವ ದರ್ಶನ್‌ ಹಾಗು ಅವರ ಟೀಂ ಗೆ ಪೊಲೀಸರು ಬಿರಿಯಾನಿ ನೀಡಿದ್ದರು ಎಂದು ಹೇಳಲಾಗಿತ್ತು.

ತುಮಕೂರು: ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ತೂಗುದೀಪ್ ಬಂಧನವಾಗಿದೆ. ಖಾಕಿ ವಶದಲ್ಲಿರುವ ಇರುವ ದರ್ಶನ್‌ ಹಾಗು ಅವರ ಟೀಂ ಗೆ ಪೊಲೀಸರು ಬಿರಿಯಾನಿ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ ಅಸಲಿ ವಿಚಾರವನ್ನು ಚಲನಚಿತ್ರ ನಿರ್ಮಾಪಕ ಕುಮಾರ ನಾಯ್ಕ್ ರಿವೀಲ್‌ ಮಾಡಿದ್ದಾರೆ.

Ad
300x250 2

ದರ್ಶನ್ಗೆ ಬಿರಿಯಾನಿ ಕೊಟ್ಟಿಲ್ಲ ಬದಲಿಗೆ ಸಿಬ್ಬಂದಿಗಳಿಗೆ ತರಿಸಿದ್ದು.ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರಮುಖ ಹಂತಕ್ಕೆ ತಲುಪುವ ಹೊತ್ತಲ್ಲೇ ತನಿಖಾಧಿಕಾರಿಯನ್ನು ದಿಢೀರ್ ಬದಲಾವಣೆ ಮಾಡಿದ ಸರ್ಕಾರದ ಈ ನಿರ್ಧರದ ವಿರುದ್ಧ ಗುಳ್ಳೆನರಿ, ತಲವಾರ್ ಚಿತ್ರದ ನಿರ್ಮಾಪಕ ಕುಮಾರ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ದರ್ಶನ್ ತಂಡವನ್ನು ಬಂಧಿಸುವಲ್ಲಿ ಕಾಮಕ್ಷಿ ಪಾಳ್ಯದ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ಪಾತ್ರ ಶ್ಲಾಘನೀಯ , ಗಿರೀಶ್ ನಾಯ್ಕ್ ಒಬ್ಬ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದವರು .ಕೆವಲ ಎರಡೇ ದಿನದಲ್ಲಿ ಬಂಧಿಸಿದ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದಾರೆ . ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಪೊಲೀಸ್ ಇಲಾಖೆ ಉಳಿಸಿಕೊಳ್ಳಬೇಕಿತ್ತು, ತನಿಖೆಗೆ ಮತ್ತಷ್ಟು ಆಯಾಮ ಸಿಕ್ಕು-ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿತ್ತು ತನಿಖೆಯ ಈ ಹಂತದಲ್ಲಿ ಅವರನ್ನು ಬದಲಾಯಿಸಿದ್ದು ಸಮಂಜಸವಲ್ಲ ಎಂದು ನಿರ್ಮಾಪಕ ಕುಮಾರ ನಾಯ್ಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

Ad
Ad
Nk Channel Final 21 09 2023
Ad