ತುಮಕೂರು: ಹಾಡಹಗಲೇ ಚಿನ್ನದಂಗಡಿ ದರೋಡೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ.

ಮುಸುಕುಧಾರಿಗಳು ಜೀಪ್ ನಲ್ಲಿ ಬಂದು ಅಂಗಡಿ ಮಾಲೀಕನ ಮುಖಕ್ಕೆ ಖಾರದ ಪುಡಿ ಎರಚಿ ದರೋಡೆ ಮಾಡಿದ್ದಾರೆ. ಜಗದಾಂಬ ಚಿನ್ನದಂಗಡಿಗೆ ದಾಳಿ ಮಾಡಿದ ಗ್ಯಾಂಗ್ 30 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಬೆಳ್ಳಿ ದರೋಡೆ ಮಾಡಿದ್ದಾರೆ. ರಾಜಸ್ಥಾನದ ಗ್ಯಾಂಗ್ ಕೃತ್ಯ ಎಸಗಿದ್ದಾರೆ.

ಈ ಜ್ಯೂವೆಲರಿ ಶಾಪ್‌ಗೆ ಮಟ ಮಟ ಮಧ್ಯಾಹ್ನ ನುಗ್ಗಿದ ದರೋಡೆಕೋರರು ಗನ್‌ ಪಾಯಿಂಟ್‌ನಲ್ಲಿ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಕೋಟ್ಯಾಂತರ ಮೌಲ್ಯದ ಆಭರಣ ಲೂಟಿ ಮಾಡಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ದರೋಡೆ ನಡೆದ ಚಿನ್ನಾಭರಣ ಮಳಿಗೆಯಲ್ಲಿ ಪ್ರತಿನಿತ್ಯ ಎಷ್ಟು ವಹಿವಾಟು ನಡೆಯುತ್ತದೆ. ಯಾವ ಯಾವ ಸಮಯದಲ್ಲಿ ಹೆಚ್ಚು ಗ್ರಾಹಕರು ಅಂಗಡಿಯಲ್ಲಿರುತ್ತಾರೆ, ಯಾವ ಸಮಯದಲ್ಲಿ ಕಡಿಮೆ ಜನ ಇರುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಪಡೆದೇ ನಿನ್ನೆ ಮಧ್ಯಾಹ್ನ ದರೋಡೆಕೋರರು ಆಭರಣ ದರೋಡೆ ಮಾಡಿದ್ದಾರೆಂದು ಅವರು ವಿವರಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದರೋಡೆಕೋರರ ಚಲನವಲನ, ಭಾವಚಿತ್ರಗಳ ದೃಶ್ಯಾವಳಿಯನ್ನಾಧರಿಸಿ ಅವರ ಬಂಧನಕ್ಕೆ ನಮ ಪೊಲೀಸರು ಬಲೆ ಬೀಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.