ಮೈಸೂರು : ಸಿಡಿಲಿಗೆ ಮಹಿಳೆ ಬಲಿ, ಎರಡು ಹಸುಗಳು ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ನಡೆದಿದೆ.
ಸತ್ಯಗಾಲ ಗ್ರಾಮದ ವಿನೋದಾ(38) ಮೃತ ಮಹಿಳೆ. ಜಮೀನಿನಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳನ್ನು ಮನೆಗೆ ಕರೆತರಲು ಹೋದಾಗ ಘಟನೆ ನಡೆದಿದೆ. ಭಾರೀ ಮಳೆ ಹಿನ್ನಲೆ ಸಿಡಿಲು ಬಡಿದು ಸ್ಥಳದಲ್ಲಿಯೇ ಎರಡು ಹಸು ಸಾವನ್ನಪ್ಪಿದೆ.
ಸಿಡಿಲ ಬಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ವಿನೋದಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

