ಮೈಸೂರು : ನುಗು ಜಲಾಶಯದ ಬಳಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸರಗೂರು ತಾಲೂಕಿನ ನುಗು ಜಲಾಶಯದಲ್ಲಿ ಕಾಡಿನಿಂದ ನಾಡಿಗೆ ಕಾಡಾನೆಗಳು ಬಂದಿದೆ.

ಮುಖ್ಯ ರಸ್ತೆಗೆ ಬಂದು ಅಡ್ಡಡಿಡ್ಡಿ ಕಾಡಾನೆಗಳು ಓಡಾಡುತ್ತಿದೆ. ಕಾಡಾನೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದೆ. ಈ ವೇಳೆ ಅರಣ್ಯ ಇಲಾಖೆ ಜೀಪ್ ನ್ನು ಕಾಡಾನೆ ಜಖಂಗೊಳಿಸಿದೆ.

ಅದೃಷ್ಟವಶಾತ್ ಜೀಪ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ಕಾಲ ಕಾಡಾನೆಗಳು ಆತಂಕ ಸೃಷ್ಟಿಸಿದೆ. ಕೊನೆಗೂ ಆನೆಗಳನ್ನ ಸಿಬ್ಬಂದಿ ಅರಣ್ಯಕ್ಕೆ ಅಟ್ಟಿಸಿದ್ದಾರೆ.