ನಂಜನಗೂಡು: ಗೌತಮ ಪಂಚ ಮಹಾ ರಥೋತ್ಸವದ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ದೊಡ್ಡ ಜಾತ್ರೆಯ ರಥೋತ್ಸವವನ್ನು ವೀಕ್ಷಿಸಲು ಆಗಮಿಸಿದ್ದ ಪಟ್ಟಣ ವ್ಯಾಪ್ತಿಯ ಶಂಕರಪುರ ನಿವಾಸಿಗಳಾದ ಚೆಲುವರಾಜು, ಅಪ್ಪು ಎಂಬ ಭಕ್ತರು ರಥೋತ್ಸವವನ್ನು ವೀಕ್ಷಿಸಲು ಆಗಮಿಸಿದ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ವ್ಯಕ್ತಿಗಳು ಕೆಳಗೆ ಬಿದ್ದ ಸಂದರ್ಭದಲ್ಲಿ ತೀವ್ರ ಗಾಯಗಳಾಗಿವೆ.

ತಕ್ಷಣ ಅಂಬುಲೆನ್ಸ್ ಮೂಲಕ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.