News Karnataka Kannada
Saturday, April 27 2024
ಮೈಸೂರು

ಈಜಲು ಹೋದ ಯುವಕ ಸುಳಿಗೆ ಸಿಲುಕಿ ನೀರುಪಾಲು

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸಮೀಪದಲ್ಲಿರುವ ಕಬಿನಿ ಹತ್ವಾಳ್ ಕಟ್ಟೆಯಲ್ಲಿ ನಡೆದಿದೆ.
Photo Credit : NewsKarnataka

ಮೈಸೂರು: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸಮೀಪದಲ್ಲಿರುವ ಕಬಿನಿ ಹತ್ವಾಳ್ ಕಟ್ಟೆಯಲ್ಲಿ ನಡೆದಿದೆ. ನಂಜನಗೂಡು ಪಟ್ಟಣದ ರಾಮಸ್ವಾಮಿ ಲೇಔಟ್ ನಿವಾಸಿ 23 ವರ್ಷದ ಅಭಿಷೇಕ್ ಮೃತ ಯುವಕನಾಗಿದ್ದಾನೆ. ನಂಜನಗೂಡು ಪಟ್ಟಣದಿಂದ ತನ್ನ ಮೂವರು ಸ್ನೇಹಿತರ ಜೊತೆ ಈಜಲು ಬಂದಿದ್ದಾರೆ. ಈ ವೇಳೆ ಅಭಿಷೇಕ್, ಸುಳಿಗೆ ಸಿಲುಕಿ ಸಾವನಪ್ಪಿದ್ದಾನೆ. ಇನ್ನುಳಿದ ಮೂವರು ಬದುಕುಳಿದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ, ಮೈಸೂರಿನ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ. ನೀರಾವರಿ ಇಲಾಖೆಯ ಬೇಜವಾಬ್ದಾರಿಯಿಂದ ಸಾವು ನೋವುಗಳು ಸಂಭವಿಸುತ್ತಿವೆ. ಯಾವುದೇ ನಾಮಫಲಕಗಳನ್ನು ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಾಮಫಲಕಗಳನ್ನು ಹಾಕಿ ಈ ಸ್ಥಳಕ್ಕೆ ಸಾರ್ವಜನಿಕರು ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್, ಪಿಎಸ್ಐ ರಸುಲ್ ಪಾಗವಾಲೆ, ದೊಡ್ಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು