ಮೈಸೂರು :ಕೆ.ಆರ್ ನಗರ ತಾಲ್ಲೂಕು ಆಡಳಿತದ ವಿರುದ್ಧ ರೈತರು ಕೆ.ಆರ್ ನಗರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು.

ಚಾಪೆ ದಿಂಬು ಹಾಸಿ, ರಗ್ಗು ಹೊದ್ದುಕೊಂಡು ಮಲಗಿ ಕೆಆರ್ ನಗರ ತಾಲ್ಲೂಕಿನ ಅರ್ಜುನಳ್ಳಿ ಗ್ರಾಮದ ರೈತ ರಾಮ್ ಪ್ರಸಾದ್ ಪ್ರತಿಭಟಿಸಿದರು.

ತಾಲೂಕು ಆಡಳಿತ ರೈತರಿಗೆ, ಸಾರ್ವಜನಿಕರಿಗೆ ಯಾವುದೇ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ. ರೈತರ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ.

ಹತ್ತಾರು ಬಾರಿ ಅಲೆದರೂ ಅಧಿಕಾರಿಗಳು ರೈತರ, ಸಾರ್ವಜನಿಕರ ಕಷ್ಟ ಕೇಳಲ್ಲ. ಯಾವುದೇ ಕೆಲಸ ಮಾಡದೇ ಸಾರ್ವಜನಿಕರನ್ನ ಅಲೆಯುವಂತೆ ಮಾಡುತ್ತಿದ್ದಾರೆ. ಕೆ.ಆರ್ ನಗರ ತಾಲ್ಲೂಕು ಆಡಳಿತದ ವೈಖರಿಗೆ ರೈತ ರಾಮ್ ಪ್ರಸಾದ್ ಆಕ್ರೋಶ‌ ವ್ಯಕ್ತಪಡಿಸಿದರು.