ನಂಜನಗೂಡು: ಬಟ್ಟೆ ಬಿಚ್ಚಿ ಚರಂಡಿ ಸ್ವಚ್ಛತೆ ನಿವಾಸಿ ಇಳಿದ ಘಟನೆ ನಂಜನಗೂಡು ತಾಲ್ಲೂಕಿನ ಕುರಿಹುಂಡಿ ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ಎಷ್ಟೇ ಮನವಿ ಮಾಡಿದ್ರು ಯಾವುದೇ ಪ್ರಯೋಜನವಿಲ್ಲ. ಕುರಿಹುಂಡಿ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ವಚ್ಚತೆಯಲ್ಲಿ ಲಕ್ಷಾಂತರ ಬಿಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸ್ವಚ್ಚತೆ ಹೆಸರಿನಲ್ಲಿ ಕುರಿಹುಂಡಿ ಗ್ರಾ.ಪಂ ಅಧಿಕಾರಿಗಳು ಬಿಲ್ ಮಾಡಿದ್ದಾರೆ. ಬಿಲ್ ಮಾಡಿಕೊಂಡಿದ್ದರು ಗ್ರಾಮದಲ್ಲಿ ಸ್ವಚ್ಛತೆ ಇಲ್ಲ. ಕುರಿಹುಂಡಿಯಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದೆ.

ಬಟ್ಟೆ ಬಿಚ್ಚಿ ನಿವಾಸಿಗಳು ಚರಂಡಿ ಸ್ವಚ್ಛಗೊಳಿಸಿದರು. ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದೆ. ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಸ್ವಚ್ಚ ಮಾಡದೆ ಇದ್ದಲ್ಲಿ ಗ್ರಾಪಂ ಮುತ್ತಿಗೆಗೆ ಎಚ್ಚರಿಕೆ ನೀಡಲಾಗಿದೆ.