News Karnataka Kannada
Tuesday, May 07 2024
ಮೈಸೂರು

ಪಾಂಡವಪುರ: ಖ್ಯಾತ ಸ್ಯಾಕ್ಸೋ ಫೋನ್ ಕಲಾವಿದ ನಿಂಗರಾಜು ನಿಧನ

Pandava
Photo Credit : By Author

ಪಾಂಡವಪುರ: ಪಟ್ಟಣದ ಹಾರೋಹಳ್ಳಿ ಗ್ರಾಮದ ಖ್ಯಾತ ಸ್ಯಾಕ್ಸೋ ಫೋನ್ ಕಲಾವಿದ ನಿಂಗರಾಜು (40) ನಿಧನರಾದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಕ್ಸೋ ಫೋನ್ ನಿಂಗರಾಜು ಅವರನ್ನು ಕಳೆದ ನಾಲ್ಕು ದಿನಗಳಿಂದ ಹಿಂದೆ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ರಾತ್ರಿ ಮೃತಪಟ್ಟರು. ಸ್ಯಾಕ್ಸೋ ಫೋನ್ ವಾದನವನ್ನು ನುಡಿಸುವಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ನಿಂಗರಾಜು ಅವರು ನಾದ ಚಿಕಿತ್ಸೆ ಪ್ರಯೋಗ ಕೂಡ ನಡೆಸಿದ್ದರು. ಜತೆಗೆ ಕಂಸಾಳೆ ಕಲಾವಿದರಾಗಿದ್ದರು. ಹಲವಾರು ವರ್ಷಗಳಿಂದ ಹಿಂದೆ ಓರಿಸ್ಸಾದಲ್ಲಿ ನಡೆದ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿಯೂ ಭಾಗವಹಿಸಿದ್ದರು.

ಕಳೆದ 2004ರಲ್ಲಿ ಆಸ್ಟ್ರೇಲಿಯಾ ದೇಶಕ್ಕೂ ಹೋಗಿ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದ ನಿಂಗರಾಜು ಅವರನ್ನು ಅಮೇರಿಕಾದ ಅಕ್ಕ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿಯೂ ಕೂಡ ಸ್ಯಾಕ್ಸೋ ಫೋನ್ ನುಡಿಸಿ ಗಮನಸೆಳೆದಿದ್ದರು.

ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದಿಂದ ನೀಡಲಾಗುವ ಪ್ರತಿಷ್ಠಿತ `ಕಾವೇರಿ’ ಪ್ರಶಸ್ತಿ, ಕನಕ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಸ್ಯಾಕ್ಸೋ ಫೋನ್ ನಿಂಗರಾಜುಗೆ ಲಭಿಸಿದ್ದವು.

ಜತೆಗೆ ನಿಂಗರಾಜು ಹಲವಾರು ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ದೇಶಾದ್ಯಂತ ಪ್ರತಿಷ್ಠಿತ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸಿದ್ದರು. ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಸ್ವಗ್ರಾಮ ಹಾರೋಹಳ್ಳಿಯಲ್ಲಿ ನೆರವೇರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು