News Karnataka Kannada
Monday, May 13 2024
ಮೈಸೂರು

ನಂಜನಗೂಡು: ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳು

Officials who issued death certificates while alive
Photo Credit : News Kannada

ನಂಜನಗೂಡು: ಜೀವಂತ ಇರುವಾಗಲೇ ಅಜ್ಜಿ ಮತ್ತು ವ್ಯಕ್ತಿಯನ್ನು ಸಾಯಿಸಿ ಮರಣ ಪತ್ರ ನೀಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.  ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ತವರು ಜಿಲ್ಲೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ನಂಜನಗೂಡು ತಾಲೂಕಿನ ಗೀಕಹಳ್ಳಿ ಗ್ರಾಮದ ಬಸಮ್ಮ ಎಂಬ ಅಜ್ಜಿಗೆ ಜೀವಂತವಿದ್ದರೂ ಮರಣ ದೃಢೀಕರಣ ಪತ್ರವನ್ನು ಸೃಷ್ಟಿ ಮಾಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಬಸಮ್ಮ 15-03-1981 ರಲ್ಲೇ ಮರಣ ಹೊಂದಿದ್ದಾಳೆ ಎಂದು ಮರಣ ಪತ್ರವನ್ನು ಕಂದಾಯ ಇಲಾಖೆಯಿಂದ ನೀಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಕೆ ಮಾಡಲು ವಿದೇಶದಲ್ಲಿರುವ ಚಂದ್ರಶೇಖರ್ ರವರು ಬದುಕಿದ್ದರೂ ಡೆತ್ ಸರ್ಟಿಫಿಕೇಟ್ ಮಾಡಿ ಪೌತಿ ಖಾತೆ ಸೃಷ್ಟಿ ಮಾಡಿದ್ದಾರೆ.

ಮುಳ್ಳೂರು ಗ್ರಾಮದ ಸರ್ವೇ ನಂ. 442ರಲ್ಲಿ 01.26 ಹಾಗೂ 444 ರಲ್ಲಿ 01.30 ಗುಂಟೆ ಆಸ್ತಿಯನ್ನು ಕೃಷ್ಣೇಗೌಡ, ಶಿವಮಲ್ಲೇಗೌಡ ಎಂಬುವರಿಗೆ  ಅಕ್ರಮವಾಗಿ ಪೌತಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. 2022 ನೇ ಸಾಲಿನಲ್ಲಿ ಖಾತೆ ಬದಲಾಯಿಸಿರುವ ಭ್ರಷ್ಟ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಕಸಭಾ ಹೋಬಳಿ ರಾಜಸ್ವ ನಿರೀಕ್ಷಕ ಪ್ರಕಾಶ್, ತಹಸೀಲ್ದಾರ್ ಶಿವಮೂರ್ತಿ ಹಾಗೂ ಶಿರಸ್ತೇದಾರ್ ಶ್ರೀನಾಥ್ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.

ಇನ್ನೂ ಬಸಮ್ಮನ ಹೆಸರಲ್ಲಿ ಸರ್ವೇ ನಂ.140/2 ರಲ್ಲಿ 01 ಎಕರೆ ಜಮೀನು ಪೌತಿ ಖಾತೆ ಮಾಡಲಾಗಿದ್ದು, 19-07-2022 ರಂದು ಎರಡು ಪ್ರಕರಣಗಳಲ್ಲಿ ನಕಲಿ ವಂಶ ವೃಕ್ಷ ದೃಡೀಕರಣ ಪತ್ರ ಸೃಷ್ಠಿಸಿ, ಮತ್ತೊಬ್ಬರಿಂದ ನಾನೇ ಬಸಮ್ಮನ ಹೆಣ್ಣು ಮಕ್ಕಳು ಎಂದು ಪೌತಿ ಖಾತೆಗೆ ಅರ್ಜಿಯನ್ನು ಹಾಕಿಸಿದ್ದಾರೆ.‌ ಆದರೆ, ಶಿವಮ್ಮ, ರತ್ನಮ್ಮ ಎಂಬುವರು ಬಸಮ್ಮನ ಹೆಣ್ಣು ಮಕ್ಕಳೇ ಅಲ್ಲ ಎಂದು ತಿಳಿದು ಬಂದಿದೆ. ಶಿವಮ್ಮ, ಮತ್ತು ರತ್ನಮ್ಮ ಎಂಬ ಮಹಿಳೆಯ ಬೇರೆ ಜನಾಂಗದವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರನ್ನು ಕೇಳಿಲ್ಲ ಜಮೀನಿನ ಸ್ಥಳ ಪರಿಶೀಲನೆ ಮಾಡಿಲ್ಲ. ಹಣದಾಸೆಗೆ ದಾಖಲೆಗಳನ್ನು ಸೃಷ್ಟಿಸಿ, ಪರಿಶೀಲಿಸದೆ ಅಂದಿನ ತಹಶೀಲ್ದಾರ್ ಶಿವಮೂರ್ತಿ ಸಹಿ ಹಾಕಿ ಅಕ್ರಮ ಎಸಗಿದ್ದಾರೆ. ತಹಶೀಲ್ದಾರ್ ಶಿವಮೂರ್ತಿ, ಗ್ರಾಮ ಲೆಕ್ಕಧಿಕಾರಿ ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ಪ್ರಕಾಶ್ ಹಾಗೂ ಶಿರಸ್ತೇದಾರ್ ಶ್ರೀನಾಥ್ ರವರ ವಿರುದ್ದ ಸೂಕ್ತ ತನಿಖೆ ನಡೆಸಬೇಕು. ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಒತ್ತಾಯ ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ಒತ್ತಾಯ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು