News Karnataka Kannada
Friday, May 10 2024
ಮೈಸೂರು

ಆಧ್ಯಾತ್ಮಿಕ ಜ್ಞಾನ ಧ್ಯಾನ ಅವಶ್ಯಕ: ಕೆ.ಹರೀಶ್ ಗೌಡ

Spiritual knowledge, meditation essential: K Harish Gowda
Photo Credit : By Author

ಮೈಸೂರು: ಹಿಂದಿನ ಶತಮಾನಗಳಲ್ಲಿ ಆಧ್ಯಾತ್ಮಿಕ ಜ್ಞಾನ ಧ್ಯಾನ ಇತ್ಯಾದಿಗಳು 60 ವರ್ಷ ಮೇಲ್ಪಟ್ಟವರಿಗೆ ಎಂಬ ಮಾತಿತ್ತು, ಆದರೆ ಇಂದಿನ‌ ದಿನಗಳು ಹಾಗಲ್ಲ ಯಾವುದೇ ಮತ ಧರ್ಮ ಪಂಥ ಪಂಗಡ ವರ್ಗದ ಎಲ್ಲಾ ವಯಸ್ಸಿನವರಿಗೂ ಆಧ್ಯಾತ್ಮಿಕ ಜ್ಞಾನ ಧ್ಯಾನಗಳ ಅವಶ್ಯಕತೆ ಇದೆ‌ ಎಂದು ಶಾಸಕರಾದ ಕೆ ಹರೀಶ್ ಗೌಡ ಅಭಿಪ್ರಾಯ ಪಟ್ಟರು.

ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ‌ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ‌ ಯಾದವಗಿರಿ ಸೇವಾ ಕೇಂದ್ರದ‌‌ ವತಿಯಿಂದ ಜಯಲಕ್ಷ್ಮಿಪುರಂ ಬಡಾವಣೆಯ ಲ್ಲಿ ನೂತನವಾಗಿ ತೆರೆಯಲಾಗಿರುವ ರಾಜಯೋಗ ಶಿಕ್ಷಣ ಸೇವಾ ಕೇಂದ್ರ ವನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿ ಕಲಿಸುವ ರಾಜಯೋಗ ಶಿಕ್ಷಣವು ಮನುಷ್ಯನ ಮನಸ್ಸಿನಲ್ಲಿ ನಡೆಯುವ ನಕರಾತ್ಮಕತೆಯನ್ನು ಹೋಗಲಾಡಿಸಿ ಸಕರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವ ವಿದಿವಿಧಾನವನ್ನು ಉಚಿತವಾಗಿ ಕಲಿಸುತ್ತಿರುವುದು ಶಾಘ್ಲನೀಯ ಎಂದರು.

ಶಿವ ಧ್ವಜಾರೋಹಣ ಮಾಡಿ ಮಾತನಾಡಿದ ಸೋಮೇಶ್ವರನಾಥ ಸ್ವಾಮೀಜಿ ಹೃದಯದ ಶ್ರೀಮಂತಿಕೆ ಹೆಚ್ಚಿಸಿಕೊಳ್ಳ ಲು ಇಂತಹ ಸೇವಾಕೇಂದ್ರಗಳ ಅವಶ್ಯಕತೆ ಇದೆ. ಇಲ್ಲಿ ಬೋದಿಸುವ ವಿಷಯಗಳು ಶಾಶ್ವತವಾದದ್ದು, ಅನಂತವಾದದ್ದು ಆನಂದಮಯವಾದದ್ದು, ನಿತ್ಯವಾದದ್ದು. ಅಂತಹ ಆನಂದವನ್ನು ಸಂತೃಪ್ತಿಯನ್ನು ಶಾಶ್ವತವನ್ನು ಕೊಡುವಂತಹದ್ದು ಯಾವುದು ಎಂದರೆ ಮನಸ್ಸಾಗಿದೆ. ಅಂತಹ ಮನಸ್ಸನ್ನು ನಿಗ್ರಹಿಸಿ ಹಿಡಿದಿಡುವ ವ್ಯವಸ್ಥೆಗೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಉಚಿತ ಸೇವಾ ಕೇಂದ್ರ ವನ್ನು ಜನತೆಗೆ ಲೋಕಾರ್ಪಣೆಗೊಳಿಸಿದೆ ಎಂದರು.

ರಾಜಯೋಗಿನಿ‌ ಬ್ರಹ್ಮಾಕುಮಾರಿ ಲಕ್ಷ್ಮೀಜೀ ಮಾತನಾಡಿ ಈಶ್ವರೀಯ ವಿಶ್ವವಿದ್ಯಾಲಯ ಮೈಸೂರಿನಲ್ಲಿ ತೆರೆದು 55 ವರ್ಷಗಳಾಗಿದೆ. ಈ ಮೂಲಕ ಬೇರೆ ಜಿಲ್ಲೆಗಳಲ್ಲಿ ಕೇರಳದಲ್ಲಿ ತೆರೆದಿದ್ದರೂ ಕೂಡ ಮೈಸೂರಲ್ಲಿ ಮಹಾರಾಜರ‌ ಕಾಲದಲ್ಲಿ ಇದು ಸ್ಥಾಪನೆಯಾಗಿ ಆನಂತರ ಮೊಹಲ್ಲಗಳಲ್ಲಿ ತೆರೆದು ಮನಸ್ಸಿನ ನೆಮ್ಮದಿಗಾಗಿ‌ ಜ್ಞಾನ ಧ್ಯಾನಗಳನ್ನು ಕಲಿಸಲಾಗುತ್ತಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಕೈಗಾರಿಕೋದ್ಯಮಿ ಜಗನ್ನಾಥ ಶಣೈ, ವಿಜಯ ಲಕ್ಷ್ಮಿ ಭಾಗವತ್, ಡಾ ಶಿಲ್ಪ ಅವರೇಬೀಳ್ ರವರು ಮಾತನಾಡಿದರು. ಬಿಕೆ ರಂಗನಾಥ ಶಾಸ್ತೀಜಿ ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸೇವಾ ಕೇಂದ್ರದಲ್ಲಿ ಪ್ರತಿನಿತ್ಯ ಬೆಳಗ್ಗೆ 9 ರಿಂದ 12 ಸಂಜೆ 5 ರಿಂದ 8 ರವರೆಗೆ ಎರಡೆರಡು ತಂಡಗಳಲ್ಲಿ ಉಚಿತ ರಾಜಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಇದರಪೂರ್ಣಲಾಭ ಪಡೆದುಕೊಳ್ಳುವಂತೆ ‌ ಕರೆ ನೀಡಿದರು. ಕಾರ್ಯಕ್ರಮಕ್ಕೆ ಮೊದಲು ಬಡಾವಣೆಯ ರಾಜಬೀದಿಗಳಲ್ಲಿ‌‌ ಶಿವ ಧ್ವಜದೊಂದಿಗೆ ಶ್ವೇತ‌‌ ವಸ್ತ್ರದಾರಿ ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರು ಪೂರ್ಣಕುಂಭದೊಂದಿಗೆ ಮಂಗಳವಾದ್ಯ ಶಿವಲಿಂಗದ ಮೆರವಣಿಗೆಯೊಂದಿಗೆ ಶಾಂತಿ ಶೋಭಾ ಯಾತ್ರೆ ನಡೆಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು