News Karnataka Kannada
Sunday, April 28 2024
ಮೈಸೂರು

ನನಗೆ ಟಿಕೆಟ್ ತಪ್ಪಿದ್ದಕ್ಕೆ ಜನರಿಗೆ ಬೇಸರ: ಪ್ರತಾಪ್ ಸಿಂಹ

ನನಗೆ ಟಿಕೆಟ್ ತಪ್ಪಿದ್ದಕ್ಕೆ ಜನರಿಗೆ ಬೇಸರವಾಗಿದೆ. ಈ ಕಾರಣಕ್ಕಾಗಿ ನಮ್ಮ ಅಭ್ಯರ್ಥಿಗೆ ತೊಂದರೆಯಾಗಬಾರದು ಎಂದು ನಾನೇ ಖುದ್ದು ಅಭ್ಯರ್ಥಿಯ ಜತೆಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
Photo Credit : NewsKarnataka

ಮೈಸೂರು: ನನಗೆ ಟಿಕೆಟ್ ತಪ್ಪಿದ್ದಕ್ಕೆ ಜನರಿಗೆ ಬೇಸರವಾಗಿದೆ. ಈ ಕಾರಣಕ್ಕಾಗಿ ನಮ್ಮ ಅಭ್ಯರ್ಥಿಗೆ ತೊಂದರೆಯಾಗಬಾರದು ಎಂದು ನಾನೇ ಖುದ್ದು ಅಭ್ಯರ್ಥಿಯ ಜತೆಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೆ ನಿಂತಿದ್ದರೆ ೨-೩ ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ. ಯದುವೀರ್ ಅವರಿಗೆ ಟಿಕೆಟ್ ಕೊಟ್ಟರು ಎಂಬ ಖುಷಿಗಿಂತ ಪ್ರತಾಪಸಿಂಹಗೆ ಟಿಕೆಟ್ ತಪ್ಪಿದ್ದರ ಬಗ್ಗೆ ಸಂಕಟ ಜಾಸ್ತಿಯಾಗಿದೆ. ಹೀಗಾಗಿ ಜನರ ಬಳಿ ನಾನೇ ಹೋಗಿ ದೇಶಕ್ಕೆ ಮೋದಿ ಬೇಕು, ಯದುವೀರ್ ಪರವಾಗಿ ಕೆಲಸ ಮಾಡಿ ಎಂದು ಪ್ರಚಾರ ಮಾಡುತ್ತಿದ್ದೇನೆ. ಅಭಿವೃದ್ಧಿಗೆ ಮೇಲ್ಪಂಕ್ತಿಯನ್ನು ನಾನು ಹಾಕಿಕೊಟ್ಟಿದ್ದೇನೆ ಎಂದರು.

ಯದುವೀರ್ ಅವರನ್ನು ಗೆಲ್ಲಿಸುವುದು ನನ್ನ ಮುಂದಿನ ಗುರಿಯಾಗಿದ್ದು, ನಾನು ಪಕ್ಷದಲ್ಲಿ ಸಿಗುವ ಸ್ಥಾನಮಾನದ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ನಾನೇ ಖುದ್ದು ಅಭ್ಯರ್ಥಿಯ ಜತೆಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನನಗೆ ಜನರು ಕೊಟ್ಟಿರುವ ಸ್ಥಾನಮಾನದ ಮುಂದೆ ಬೇರೆ ಯಾವುದು ಮುಖ್ಯವಲ್ಲ ಎಂದರು.

ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ಜಾರಿಯಾದ ದಿನದಿಂದ ರಾಜ, ಮಹಾರಾಜ ಎಂಬುದಿಲ್ಲ. ಯದುವೀರ್ ಅವರು ಬಿಜೆಪಿ ಅಭ್ಯರ್ಥಿ, ನಾನು ಕೂಡ ಹೇಳಿಕೆ ಕೊಡುವಾಗ ಅವರು ಪ್ರಜಾ ಪ್ರತಿನಿಧಿಯಾಗಿರಬೇಕು ಎಂದಿದ್ದೆ. ಯದುವೀರ್ ಕೂಡ ಪ್ರಜಾ ಪ್ರತಿನಿಧಿಯಾಗಲು ಬಂದಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದೇಶದಲ್ಲಿ ರಾಜಾಡಳಿತ ಇಲ್ಲ. ನವರಾತ್ರಿ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವಾಗ ವಿಧಿವಿಧಾನಗಳಿಗೆ ಸೀಮಿತವಾಗಿರುತ್ತಾರೆ.

ಸಿದ್ದರಾಮಯ್ಯ ಅವರನ್ನು ನಾನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ನನಗೂ ಅವರಿಗೂ ಬಹಳಷ್ಟು ವಿರೋಧಗಳಿವೆ. ಮೈಸೂರಿನ ಜನ ಯದುವೀರ್ ಅವರನ್ನು ಮಹಾರಾಜ ಎಂದು ಕರೆಯುತ್ತಾರಾ? ಅಥವಾ ಬಿಜೆಪಿ ಅಭ್ಯರ್ಥಿ ಎನ್ನುತ್ತಾರಾ? ರಾಜರು ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿಎಂ ಬಿಜೆಪಿ ಅಭ್ಯರ್ಥಿ ಎಂದು ಕರೆದಿರುವುದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಯಾವ ರಾಜ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪ್ರತಾಪ್ ಸಿಂಹ ಸಮರ್ಥಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು