News Karnataka Kannada
Monday, May 13 2024
ಮೈಸೂರು

ಮೈಸೂರಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶನಿಗೆ ನಿರ್ಬಂಧ!

Plaster of Paris ganesha banned in Mysore!
Photo Credit : By Author

ಮೈಸೂರು: 2022ನೇ ಸಾಲಿನ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ, ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭವಾಗುತ್ತಿದ್ದು, ಗಣೇಶ ಮೂರ್ತಿಯ ತಯಾರಿಕೆಗಾಗಿ ಬಳಸುವ ರಾಸಾಯನಿಕ ಬಣ್ಣಗಳು, ಧರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್‌ಗಳ ಬಳಕೆಯನ್ನು ಸರ್ಕಾರವು ಸಂಪೂರ್ಣವಾಗಿ ನಿರ್ಭಂಧಿಸಿರುವುದರಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ರೀತಿಯ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ದೂರು ನೀಡಲು ಮನವಿ ಮಾಡಲಾಗಿದೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿದಲ್ಲಿ ಸಂಬಧಧಪಟ್ಟವರ ವಿರುದ್ಧ IPC 1860 ರ ಪ್ರಕಾರ ಕ್ರಿಮಿನಲ್ ಮೊಕದಮ್ಮೆಯನ್ನು ದಾಖಲಿಸಲಾಗುವುದು, ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳಲ್ಲಿ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟವನ್ನು ಸಹ ಸಂಪೂರ್ಣವಾಗಿ ನಿಷೇಧಿಸಿದೆ. ಈ ರೀತಿಯ ಗಣೇಶ ಮೂರ್ತಿ ಮಾರಾಟಗಾರರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪಾಲಿಕೆ ವಶಕ್ಕೆ ಪಡೆಯಲಾಗುವುದು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಲು ಅಥವಾ ಮಾರಾಟ ಮಾಡಲು ಸೂಚಿಸಿದೆ.

ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಬಕೆಟ್‌ಗಳಲ್ಲಿ ವಿಸರ್ಜನೆಗೊಳಿಸಿ ಬರುವ ಮಣ್ಣನ್ನು ಕೈತೋಟದಲ್ಲಿ ಹೂವಿನ ಕುಂಡಗಳಿಗೆ ಬಳಸಲು ಸೂಚಿಸಲಾಗಿದೆ.

ಪಾಲಿಕೆ ವ್ಯಾಪ್ತಿಯ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ನಿಷೇಧಿಸಿದ್ದು, ಸದರಿ ಸ್ಥಳಗಳ ಸಮೀಪದಲ್ಲಿ ತಾತ್ಕಾಲಿಕ ವಿಸರ್ಜನೆಗೆ ಅವಕಾಶ ಮಾಡಿದ್ದು, ಸದರಿ ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ಪ್ರತ್ಯೇಕವಾಗಿ ಹಸಿತ್ಯಾಜ್ಯ ಮತ್ತು ಒಣತ್ಯಾಜ್ಯವನ್ನಾಗಿ ವಿಂಗಡಿಸಿ, ವಿಲೇ ಮಾಡುವುದು ಸೂಕ್ತವಾಗಿರುತ್ತದೆ. ಪರಿಸರ ಸ್ನೇಹಿ ಗಣೇಶ ಆಚರಣೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮೈಸೂರು ಮಹಾನಗರ ಪಾಲಿಕೆ, ಪರಿಸರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹೊರಡಿಸುವ ಸೂಚನೆಗಳನ್ನು ಪಾಲಿಸಿ, ಗಣೇಶ ಹಬ್ಬ ಆಚರಣೆ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ,.

ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಯಲ್ಲಿರುವುದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ನಿಷೇಧಿತ ಪ್ಲಾಸ್ಟಿಕ್ ಬಳಸತಕ್ಕದಲ್ಲ, ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಇಚ್ಛಿಸುವ ಆಯೋಜಕರು, ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಮಾಹಿತಿಗೆ ನಾಗೇಶ್, ಅಕ್ಕನಬಳಗ 5ನೇ ಕ್ರಾಸ್ ತ್ಯಾಗರಾಜ ರಸ್ತೆ, ಕೆ.ಆರ್.ಮೊಹಲ್ಲಾ ಮೈಸೂರು (94483-94923), ನಾಗರಾಜು, 7ನೇ ಕ್ರಾಸ್ ರೈಲ್ವೆ ಗೇಟ್ ಹತ್ತಿರ ಕೃಷ್ಣಮೂರ್ತಿಪುರಂ, ಮೈಸೂರು (99452-66195), ಪ್ರಕಾಶ್, ನ್ಯೂ ಕಾಂತರಾಜು ಅರಸ್ ರಸ್ತೆ ಶಾರದಾದೇವಿನಗರ, ಮೈಸೂರು (99644-05056), ವೈ.ಎನ್.ಚಂದ್ರಮ್ಮ, ತ.ರಾ.ಸು. ವೃತ್ರ ಆಕಾಶವಾಣಿ ಹತ್ತಿರ, ಕೆ.ಆರ್.ಎಸ್.ರಸ್ತೆ ಯಾದವಗಿರಿ, ಮೈಸೂರು (94493-38536), ಕೆ.ಕೃಷ್ಣ, ಮಹಾನಗರ ಪಾಲಿಕೆ ಕಟ್ಟಡ, ಬಸವನಗುಡಿ ವೃತ್ತ ಲೋಕನಾಯಕನಗರ ಮುಖ್ಯ ರಸ್ತೆ, ಮೈಸೂರು (94489-00617), ಸಿ. ಮಂಜುನಾಥ್, ಮಹಾನಗರ ಪಾಲಿಕೆ ಕಟ್ಟಡ, ನ್ಯೂ ಶೇಷಾದ್ರಿ ಅಯ್ಯರ್ ರಸ್ತೆ, ಮಂಡಿಮೊಹಲ್ಲಾ, ಮೈಸೂರು (86601-50889), ಎಂ.ನAಜುAಡಯ್ಯ, ಮಹಾನಗರ ಪಾಲಿಕೆ ಕಟ್ಟಡ, ಎಸ್.ಟಿ.ಎಸ್. ವೃತ್ರ ಬೆಂಗಳೂರು ನೀಲಗಿರಿ ರಸ್ತೆ, ಲಷ್ಕರ್ ಮೊಹಲ್ಲಾ, ಮೈಸೂರು (94480-08342), ಶಿವಕುಮಾರ್, ನಂ. 8, ಲಷ್ಕರ್-2, ಎಂ.ಜಿ. ರಸ್ತೆ, ಉದಯಗಿರಿ, ಮೈಸೂರು (99006-84767), ರಮಾದೇವಿ, ಮಹಾನಗರ ಪಾಲಿಕೆ ಕಟ್ಟಡ, 1ನೇ ಹಂತ, ಗಾಯಿತ್ರಿಮರಂ,ಮೈಸೂರು (94804-59113) ಇಲ್ಲಿ ಸಂಪರ್ಕಿಸಬಹುದಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು