ನಂಜನಗೂಡು: ಕಷ್ಟ ಕಾಲದಲ್ಲಿ ರೋಗಿಗಳ ನೆರವಿಗೆ ನಿಲ್ಲಬೇಕಾದ 108 ಆಂಬ್ಯುಲೆನ್ಸ್ ಸಹಾಯ ಮಾಡುವುದಕ್ಕಿಂತಲೂ ಕಷ್ಟ ಕೊಡುವುದೇ ಹೆಚ್ಚು ಎಂಬಂತಾಗಿದೆ.
ಹೌದು ನಂಜನಗೂಡು ನಗರದ ಹೆರಿಗೆ ಆಸ್ಪತ್ರೆ ಯಲ್ಲಿ ಆಂಬುಲೆನ್ಸ್ ಕೆಟ್ಟು ನಿಂತು ವಾರಗಳೇ ಕಳೆದಿವೆ. ಆಂಬುಲೆನ್ಸ್ ಚಕ್ರ ಪಂಚರ್ ಆಗಿ ವಾರಗಳೇ ಕಳೆದರೂ ಸರಿಪಡಿವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಹಿಂದಕ್ಕೂ ಹೋಗಲಾರದೆ ಮುಂದೆ ಸಾಗಲಾರದೆ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತುಂಬಾ ತೊಂದರೆಯಾಗಿದೆ.
ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಈ ಆಂಬುಲೆನ್ಸ್ ಸೇವೆ ನೀಡಲಾಗುತ್ತಿತ್ತು. ಆದರೆ ಇಂದು ಕೆಟ್ಟು ನಿಂತಿದೆ. ಕೂಡಲೇ ಆಂಬುಲೆನ್ಸ್ ಸರಿಪಡಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.