News Karnataka Kannada
Sunday, May 05 2024
ಮೈಸೂರು

ಮೈಸೂರು: ಶ್ರೀ ಚಾಮುಂಡೇಶ್ವರಿ ವೈಭವ ನೃತ್ಯ ರೂಪಕ ಪ್ರದರ್ಶನ

Sri Chamundeshwari Vaibhava Dance Drama Show
Photo Credit : By Author

ಮೈಸೂರು: ದಸರಾವಸ್ತು ಪ್ರದರ್ಶನ ಪಿ‌. ಕಾಳಿಂಗರಾವ್ ಗಾನಮಂಟಪದಲ್ಲಿ ರಂಗರಸಧಾರೆ ನೃತ್ಯಪಟುಗಳು ರಂಗಭೂಮಿ‌ ಕಲಾವಿದ ವಿಜಯ್ ಕಶ್ಯಪ್ ನಿರ್ದೇಶನದಲ್ಲಿ ಶ್ರೀ ಚಾಮುಂಡೇಶ್ವರಿ ವೈಭವ ನೃತ್ಯರೂಪಕ  ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ  ಮಿರ್ಲೇ ಶ್ರೀನಿವಾಸ ಗೌಡ  ಚಾಮುಂಡೇಶ್ವರಿ ವೈಭವ ನೃತ್ಯರೂಪಕ  ಕಲಾವಿದರಿಗೆ ಪ್ರದರ್ಶನ ಪ್ರಮಾಣ ಪತ್ರ ವಿತರಿಸಿ, ಮಾತನಾಡಿ ಶ್ರೀ ಚಾಮುಂಡೇಶ್ವರಿ ತಾಯಿ ಮಹಿಷನ ಸಂಹಾರ ಮಾಡಿದ ಇತಿಹಾಸ, ಕೋಟ್ಯಾಂತರ ಆಸ್ಥಿಕರ ಧಾರ್ಮಿಕ ನಂಬಿಕೆ ಮಹಾಬಲಾದ್ರಿ ಬೆಟ್ಟಚಾಮುಂಡಿ ನೆಲೆಸಿದ ಪುರಾಣ ಪ್ರಸಿದ್ಧ ಕಥೆಗಳು ಇಂದಿನ ಯುವಪೀಳಿಗೆಗೆ ತಲುಪವಲ್ಲಿ ನಾಟಕ  ನೃತ್ಯರೂಪಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದೆ ಎಂದರು

ರಂಗಭೂಮಿ ಕಲಾವಿದ ವಿಜಯ್ ಕಶ್ಯಪ್ ರವರು ಮಾತನಾಡಿ ಕಲಾತಪಸ್ವಿ ಶ್ರೀ ಪಾರ್ವತೀಸುತರವರ ಸಂಗೀತ ಸಂಭಾಷಣೆಯ ಸಾರಥ್ಯದಲ್ಲಿ ಶ್ರೀ ಚಾಮುಂಡೇಶ್ವರಿ ವೈಭವ ನೃತ್ಯರೂಪಕ ಪ್ರದರ್ಶನ 1980ರಿಂದಲೂ ನಡೆದುಕೊಂಡು ಬಂದು ಹಲವಾರು ವೇದಿಕೆಗಳಲ್ಲಿ ಸಾವಿರಾರು ಕಲಾವಿದರು ಭಾಗಿಯಾಗಿದ್ದಾರೆ.

ಮಹಾಬಲಾದ್ರಿ ಚಾಮುಂಡಿ ಬೆಟ್ಟವಾಗಿ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಮೈಸೂರು ರಾಜ್ಯವನ್ನಾಳಿದ ಯದುವಂಶದ ಒಡೆಯರ ಕೊಡುಗೆ ಕಲೆಸಂಸ್ಕೃತಿ ವರ್ಣನೆಯನ್ನು ಹಾಗೂ ಮಹಿಷಾಸುರನಸಂಹರಿಸಲು ನಾಡದೇವತೆ ಚಾಮುಂಡೇಶ್ವರಿ ಅವತಾರ ರೂಪ ತಾಳಿದ ಇತಿಹಾಸ  ದುರ್ಗೆಯ ಕಥಾವಲೋಕನವನ್ನು ಚಾಮುಂಡೇಶ್ವರಿ ವೈಭವದ ಮೂಲಕ ನೃತ್ಯರೂಪಕದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದರು.

ರಂಗರಸಧಾರೆ ತಂಡದ ಅಧ್ಯಕ್ಷರಾದ ಕೆ.ಜಿ. ಸುಬ್ಬಕೃಷ್ಣ, ಕರ್ನಾಟಕ ವಸ್ತುಪ್ರದರ್ಶನ‌ ಪ್ರಾಧಿಕಾರದ  ಅಧ್ಯಕ್ಷರಾದ  ಮಿರ್ಲೆ ಶ್ರೀನಿವಾಸ ಗೌಡ, ಫನ್ವರ್ಲ್ಡ್ ರೆಸಾರ್ಟ್ ಉಸ್ತುವಾರಿ ಮಲ್ಲಿಕಾರ್ಜುನ್, ನಿರ್ದೇಶಕ ವಿಜಯ್ ಕಶ್ಯಪ್, ನಿರೂಪಕರಾದ ಅಜಯ್ ಶಾಸ್ತ್ರಿ ,ಅರ್ಜುನ್  ಶ್ರೀಧರ್, ಲಕ್ಷ್ಮಿಪ್ರಿಯ ನಾಗರಾಜ್,
ಪಾತ್ರದಾರಿಗಳಾದ ಮಹಿಷಾಸುರ – ವಿಜಯ್ ಕಶ್ಯಪ್ ಕೆ.ಎಸ್, ಚಾಮುಂಡಿ  – ನಿಮಿಷ ಎಂ.ಎಸ್, ಇಂದ್ರ – ಶ್ರೇಯಸ್ ಎಸ್,  ಅಗ್ನಿ – ಶ್ರೇಯಸ್ ಎ, ವಾಯು –  ಸುಬ್ರಹ್ಮಣ್ಯ ವಸಿಷ್ಠ,   ಸೂರ್ಯ – ಮಹೇಶ್ ಹನುಮಂತ, ಚಂದ್ರ – ಸುಮುಖ ಎಸ್.ರಾವ್, ಯಮ – ಆದಿತ್ಯ ಎಸ್, ನಾರದ – ನಕುಲ್  ಎಸ್ ಜಿ  ಮಂತ್ರಿ – ಭರತ್ ಜೆ, ಬ್ರಹ್ಮಾ – ಪ್ರಸಾದ್ ವಿಎಸ್, ನವದುರ್ಗಿಯರಲ್ಲಿ – ಹರ್ಷಿತ ಎನ್, ತೃಪ್ತಿ ರಾವ್, ಪ್ರಿಯಾಂಕ ರಾವ್,  ಪೂಜಾ ಆರ್ ಪವಾರ್,  ಕಾವೇರಿ, ಶ್ರದ್ಧಾ, ಸೌಪರ್ಣ, ಗ್ನಾನ್ಯಾನಂದ. ನೃತ್ಯ ಸಂಯೋಜನೆ – ಹರ್ಷಿತ  ಎನ್,  ಮತ್ತು ಆದಿತ್ಯ ಎಸ್, ಬೆಳಕು ಪೀರಪ್ಪ  ಮತ್ತು ಅಕ್ಷಯ್ ಚಂದ್ರ, ಧ್ವನಿವರ್ಧಕ  ಪ್ರಭಂಜನ್ ಶರ್ಮಪ್ರಸಾದನ ವರ್ಣಾಲಂಕಾರ ಅಶೋಕ ಮತ್ತು ಮಂಜುನಾಥ್, ವಸ್ತ್ರವಿನ್ಯಾಸ ರಾಜಪ್ಪ ಸೇರಿದಂತೆ ತಂಡದ ಸದಸ್ಯರಾದ  ಅಜಯ್ ಕಶ್ಯಪ್, ಸುಶ್ಮಿತ, ನಟರಾಜ್ ಕಶ್ಯಪ್, ಸುಜೀತ್ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು