News Karnataka Kannada
Monday, April 22 2024
Cricket
ಮೈಸೂರು

ಮೈಸೂರು ಪೊಲೀಸರಿಂದ ವಿಶೇಷ ಕಾರ್ಯಾಚರಣೆ: 15 ಆರೋಪಿಗಳ ಬಂಧನ

ನಗರ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಅಪರಾಧ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು 1,69,71,200 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು 15 ಆರೋಪಿಗಳನ್ನು ಬಂಧಿಸಿದ್ದಾರೆ.
Photo Credit : By Author

ಮೈಸೂರು: ನಗರ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಅಪರಾಧ ಪ್ರಕರಣಗಳನ್ನು ಬೇಧಿಸಿರುವ  ಪೊಲೀಸರು 1,69,71,200 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು 15 ಆರೋಪಿಗಳನ್ನು ಬಂಧಿಸಿದ್ದಾರೆ.

ವಿಶೇಷ ಕಾರ್ಯಾಚರಣೆಯನ್ನು ಕಳೆದ 15 ದಿನಗಳ ಕಾಲ ನಡೆಸಿದ ಪೊಲೀಸರು 19 ಕನ್ನ ಕಳುವು,  63 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 15 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1,69,71,200 ರೂ. ಮೌಲ್ಯದ ಮೌಲ್ಯದ 2 ಕೆ.ಜಿ 343 ಗ್ರಾಂ ಚಿನ್ನಾಭರಣ, 1 ಕೆ.ಜಿ. 357 ಗ್ರಾಂ ಬೆಳ್ಳಿ, 61 ದ್ವಿಚಕ್ರ ವಾಹನ, 2 ಕಾರು ಹಾಗೂ 1,70,000 ನಗದು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್  ಮಾಹಿತಿ ನೀಡಿದ್ದು,  ಸಿಸಿಬಿ ಪೊಲೀಸರು ಕನ್ನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 68,59,200 ಮೌಲ್ಯದ 1 ಕೆಜಿ 95 ಗ್ರಾಂ ಚಿನ್ನ, 1 ಕೆಜಿ 320 ಗ್ರಾಂ ಬೆಳ್ಳಿ ಪದಾರ್ಥ, 2 ಕಾರು, 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ಮೈಸೂರು ನಗರ, ಜಿಲ್ಲೆ, ಬೆಂಗಳೂರು ಹಾಗೂ ಇತರೇ ಜಿಲ್ಲೆಗಳಲ್ಲಿ ಕನ್ನ ಕಳುವು ಮಾಡಿರುವ ಬಗ್ಗೆ ತಿಳಿಸಿದರ ಮೇರೆಗೆ ಆರೋಪಿತರಿಂದ ಒಟ್ಟು 13 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕನ್ನ ಕಳುವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು,  26 ಲಕ್ಷ ರೂ ಮೌಲ್ಯದ 416 ಗ್ರಾಂ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ನರಸಿಂಹರಾಜ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 47,42,000ರೂ ಮೌಲ್ಯದ 832 ಗ್ರಾಂ ತೂಕದ ಚಿನ್ನದ ಒಡವೆ ಮತ್ತು 37 ಗ್ರಾಂ ತೂಕದ ಬೆಳ್ಳಿಯ ಕಾಯಿನ್  ಮತ್ತು 1,70,000 ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರಂ ಪೊಲೀಸರು ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 15 ಲಕ್ಷ ರೂ  ಮೌಲ್ಯದ 30 ವಿವಿಧ ದ್ವಿಚಕ್ರ ವಾಹನಗಳು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಮೈಸೂರು ನಗರದ ವಿದ್ಯಾರಣ್ಯಪುರಂ ಠಾಣೆಯ-2, ವಿಜಯನಗರ-1, ನಂಜನಗೂಡು ಗ್ರಾಮಾಂತರ-3, ಇಲವಾಲ-1, ಹೆಚ್.ಡಿ. ಕೋಟೆ-1, ಮೈಸೂರು ದಕ್ಷಿಣ-1 ವಾಹನ ಕಳುವು ಪ್ರಕರಣಗಳು ಪತ್ತೆಯಾಗಿವೆ. ನಜರ್‌ಬಾದ್ ಪೊಲೀಸರೂ ಕೂಡ ದ್ವಿಚಕ್ರ ವಾಹನಗಳ ಕಳುವು ಮಾಡುವ ಆರೋಪಿಯನ್ನು ಬಂಧಿಸಿದ್ದು, 9 ಲಕ್ಷ ರೂ ಮೌಲ್ಯದ 20 ವಿವಿಧ ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಒಬ್ಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ  ಆತ ಮೈಸೂರು ನಗರ, ಮಂಡ್ಯ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಇದರಿಂದಾಗಿ ನಬರ್‌ಬಾದ್ ಪೊಲೀಸ್ ಠಾಣೆಯ-9, ನರಸಿಂಹರಾಜ -1, ಲಷ್ಕರ್ 1 ಕೃಷ್ಣರಾಜ-1, ಮಂಡ್ಯ ಪಶ್ಚಿಮ -4, ಮಂಡ್ಯ ಪೂರ್ವ-3, ಬೆಂಗಳೂರು ಬ್ಯಾಟರಾಯನಪುರ-1 ದ್ವಿ ಚಕ್ರ ವಾಹನ ಕಳುವು ಪ್ರಕರಣ ಪತ್ತೆಯಾಗಿವೆ.

ಮಾತ್ರವಲ್ಲದೆ, ನರಸಿಂಹರಾಜ ಠಾಣಾ ಪೊಲೀಸರು ಪ್ರತ್ಯೇಕ 2 ಪ್ರಕರಣಗಳಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ 1,70,000 ರೂಪಾಯಿ ಮೌಲ್ಯದ 5 ದ್ವಿಚಕ್ರ ವಾಹನ, ಉದಯಗಿರಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ,  2 ಲಕ್ಷ ರೂಪಾಯಿ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, 2 ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಉದಯಗಿರಿ ಠಾಣೆ ಪೊಲೀಸರು 60,19,500 ರೂ. ಮೌಲ್ಯದ 143 ಕೆ.ಜಿ 430 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಎಸಿಪಿ ಸಂದೇಶ್ ಕುಮಾರ್, ಶಾಂತಮಲ್ಲಪ್ಪ ಸೇರಿದಂತೆ  ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು