News Karnataka Kannada
Friday, May 17 2024
ಮೈಸೂರು

ಮೈಸೂರು: ಜೆ.ಡಿ.ಎಸ್ ಮತ್ತು ಬಿಜೆಪಿಯ ಹೊಂದಾಣಿಯ ಪ್ರಶ್ನೆ ಇಲ್ಲ- ಸಿಎಂ ಬೊಮ್ಮಾಯಿ

Belagavi: Maharashtra Opposition leaders have lost their mental balance: CM Bommai
Photo Credit : G Mohan

ಮೈಸೂರು, ಸೆ.6: ಜೆ.ಡಿ.ಎಸ್ ಮತ್ತು ಬಿಜೆಪಿಯ ಹೊಂದಾಣಿಯ ಪ್ರಶ್ನೆ ಇಲ್ಲ. ಮೇಯರ್ ಹಾಗೂ ಉಪಮೇಯರ್‍ಗಳ ಗೆಲುವಿಗೆ ಒಗ್ಗಟ್ಟಿನ ಪ್ರದರ್ಶನವಾಗಿದ್ದರಿಂದ ಇದು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ರಾಮ್‍ದಾಸ್, ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮೈಸೂರಿನ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ನಗರಸಭಾ ಸದಸ್ಯರು ಒಗ್ಗಟ್ಟಿನಿಂದ ಚುನಾವಣೆಗೆ ಶ್ರಮಿಸಿದ್ದಾರೆ. ಸ್ಥಳೀಯವಾಗಿ ಅವರಿಗೆ ಹಿಂದಿನ ಅನುಭವಗಳು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೈಸೂರಿಗೆ ಯಾವ ರೀತಿ ಹಿನ್ನಡೆಯಾಗಿ ಎಂದು ಅವರು ನಮಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡು ಈ ಒಂದು ನಿರ್ಣಯಕ್ಕೆ ಬರಲು ಕಾರಣವಾಗಿದೆ. ನಾವು ಸ್ಪರ್ಧಿಸುತ್ತಿದ್ದೇವೆ ಬೇರೆ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದು ನಾವು ಮುಕ್ತವಾಗಿ ಹೇಳಿದ್ದೆವು. ನಾವು ನಮ್ಮ ಶಕ್ತಿಯ ಬಲದಿಂದ ಸ್ಪರ್ಧಿಸುವ ತೀರ್ಮಾನವನ್ನು ಮುಂಚೆ ಮಾಡಿದ್ದೆವು, ಅದರಂತೆ ಸ್ಪರ್ಧೆಯನ್ನೂ ಮಾಡಿದೆವು. ಜೆ.ಡಿ.ಎಸ್ ಉಪಮೇಯರ್‍ಗೆ ಅವರೂ ಪ್ರಯತ್ನಿಸಿದರು. ಆದರೆ ತಾಂತ್ರಿಕ ಕಾರಣದಿಂದ ಪ್ರಮಾಣಪತ್ರ ಸಿಗಲಿಲ್ಲವಾದ್ದರಿಂದ ತೊಂದರೆಯಾಯಿತು. ಚುನಾವಣೆಯಾದ ನಂತರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರಿನ ಸಮಗ್ರ ಅಭಿವೃದ್ಧಿ ಮಾಡುವುದು ನಮ್ಮ ಗುರಿ ಎಂದರು.

ಮೈಸೂರಿಗೆ ಇಂದು ಶುಭದಿನ.

ಮೈಸೂರಿಗೆ ಇಂದು ಶುಭದಿನ. ನಮ್ಮ ಪಕ್ಷದ ಮಹಾಪೌರರಾಗಿ ಶಿವಕುಮಾರ್ ಹಾಗೂ ಉಪಮಹಾಪೌರರಾಗಿ ರೂಪಾ ಅವರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಕೇವಲ ಮೇಯರ್ ಆಗಿದ್ದರು, ಈ ಬಾರಿ ಮೇಯರ್ ಹಾಗೂ ಉಪಮೇಯರ್ ಇಬ್ಬರೂ ನಮ್ಮ ಪಕ್ಷದಿಂದ ಆಯ್ಕೆ ಆಗಿದ್ದಾರೆ. ಶಿವಕುಮಾರ್ ಹಾಗೂ ರೂಪಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಅವರ ಕಾಲದಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿ ಆಗಲಿ. ಮೈಸೂರಿನ ಖ್ಯಾತಿ ಹೆಚ್ಚಲಿ. ಇಬ್ಬರೂ ಹೊಸಬರಿದ್ದಾರೆ. ದಸರಾ ಕೂಡ ವಿಜೃಂಭಣೆಯಿಂದ ಆಗಲಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು