News Karnataka Kannada
Sunday, May 05 2024
ಮೈಸೂರು

ಮೈಸೂರು: ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮೃತಪಟ್ಟ ಕವಿಯ ಹೆಸರು ಸೇರಿಸಿ ಎಡವಟ್ಟು

Mysore/Mysuru: The name of the deceased poet was included in the invitation card for the Dasara Kavi Sammelan.
Photo Credit : News Kannada

ಮೈಸೂರು, ಸೆ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ದಸರಾ ಪ್ರಧಾನ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮೃತಪಟ್ಟ ಕವಿಯೊಬ್ಬರ ಹೆಸರನ್ನು ಸೇರಿಸಿ ಎಡವಟ್ಟು ಮಾಡಿದೆ.

ಪ್ರಧಾನ ಕವಿಗೋಷ್ಟಿಯಲ್ಲಿ ರಾಜಕೀಯ ಮುಖಂಡರು ಭಾಗವಹಿಸಲಿದ್ದು, ನಿಧನರಾದ ಆಕಾಶವಾಣಿ ನಿಲಯ ನಿರ್ದೇಶಕ ಜಿ.ಕೆ ರವೀಂದ್ರ ಕುಮಾರ್ ಅವರು 2019ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ.

ಜೊತೆಗೆ ಪ್ರತಾಪ ಸಿಂಹ ಅವರು ಮೈಸೂರು-ಕೊಡಗು ಸಂಸದ ಎಂದು ಮುದ್ರಿಸುವ ಬದಲು ಚಾಮರಾಜನಗರ ಎಂದು ಮುದ್ರಿಸಿ ಎಡವಟ್ಟು ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಸೆನೆಟ್ ಸಭಾಂಗಣದಲ್ಲಿ ಅಕ್ಟೋಬರ್ 3 ರಂದು ಬೆಳಗ್ಗೆ 10.30ಕ್ಕೆ ಕವಿಗೋಷ್ಠಿ ನಡೆಯಲಿದೆ. ಒಟ್ಟು 37 ಮಂದಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸದ್ಯ ಈ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ವ್ಯಕ್ತವಾಗುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು