News Karnataka Kannada
Friday, May 03 2024
ಮೈಸೂರು

ದಿವಂಗತ ದ್ರುವನಾರಾಯಣ್ ಸವಿನೆಪಿಗಾಗಿ ನಂಜನಗೂಡಿನಲ್ಲಿ ಬೃಹತ್ ಶಿಬಿರ

Massive camp in Nanjangud in memory of late Dhruvanarayan
Photo Credit : News Kannada

ನಂಜನಗೂಡು: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇತ್ತೀಚೆಗೆ ನಿಧನರಾದ ದಿವಂಗತ ದ್ರುವನಾರಾಯಣ್ ಅವರ ಸವಿನೆಪಿಗಾಗಿ ನಂಜನಗೂಡಿನಲ್ಲಿ ಬೃಹತ್ ಶಿಬಿರವನ್ನು ಏರ್ಪಡಿಸಲಾಗಿತ್ತು.

ನಗರದ ಮಹದೇಶ್ವರ ಪ್ಯಾಲೇಸ್ ನಲ್ಲಿ ಧ್ರುವನಾರಾಯಣ್ ಹಾಗೂ ದರ್ಶನ್ ಧ್ರುವನಾರಾಯಣ್ ಅವರ ಅಭಿಮಾನಿ ಬಳಗದ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿ ಅಭ್ಯರ್ಥಿಯಾದ ಬಳಿಕ ಪ್ರಪ್ರಥಮವಾಗಿ ನಂಜನಗೂಡಿಗೆ ದರ್ಶನ್ ದೃವ ಆಗಮಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.

ದರ್ಶನ್ ಧ್ರುವನಾರಾಯಣ್ ರಕ್ತದಾನ ಶಿಬಿರಕ್ಕೆ ಭೇಟಿ ನೀಡುತ್ತಿದ್ದಂತೆ ನೂರಾರು ಯುವಕರು ಜೈಕಾರದ ಘೋಷಣೆಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು.

ಬಳಿಕ ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.ನಂತರ ರಕ್ತದಾನದಲ್ಲಿ ಪಾಲ್ಗೊಂಡ ಯುವಕರನ್ನು ಭೇಟಿ ಮಾಡಿ ಹಣ್ಣು ಹಾಗೂ ತಂಪು ಪಾನೀಯ ನೀಡಿ ಅಭಿನಂದಿಸಿದರು.

ಇದೇ ಸಂದರ್ಭ ದೃನಾರಾಯಣ್ ಅವರ ಸವಿ ನೆನಪಿಗಾಗಿ ವಿವಿಧ ಬಗೆಯ ಸಸಿಗಳನ್ನು ಕಾರ್ಯಕರ್ತರಿಗೆ ವಿತರಣೆ ಮಾಡಿದರು.

ತಮ್ಮ ನೆಚ್ಚಿನ ನಾಯಕರ ಸುಪುತ್ರರೂ ಕಾಂಗ್ರೆಸ್ ಅಭ್ಯರ್ಥಿಯುೂ ಆದ ದರ್ಶನ್ ಧ್ರುವನಾರಾಯಣ್ ಜೊತೆ ಫೋಟೋ ಹಾಗೂ ಸೆಲ್ಫಿಗಾಗಿ  ಯುವಕರು ಮತ್ತು ಕಾಂಗ್ರೆಸ್ ಮುಖಂಡರು ಮುಗಿಬಿದ್ದರು. ಒಟ್ಟಾರೆ ಬೆಳವಣಿಗೆಯಿಂದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರನ್ನು ಗೆಲ್ಲಿಸಲು ಕಾಂಗ್ರೆಸ್ನವರು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವಂತಿತ್ತು.

ಇಂದಿನ ರಕ್ತದಾನ ಶಿಬಿರದಲ್ಲಿ ಸುಮಾರು 150 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಯುವಕರು ರಕ್ತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ದರ್ಶನ್ ಧ್ರುವನಾರಾಯಣ್ ಮಾತನಾಡಿ ರಕ್ತದಾನ ಒಂದು ಶ್ರೇಷ್ಠ ವಾದ ಕೆಲಸ ಇದರಿಂದ ಹಲವಾರು ಜೀವಗಳನ್ನು ಉಳಿಸಬಹುದು ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ನಂಜನಗೂಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಮುಂದೆಯೂ ಕೂಡ ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕುರಟ್ಟಿ ಮಹೇಶ್ ,ಶಂಕರ್ ಶ್ರೀಕಂಠ ನಾಯಕ ಮುಖಂಡರಾದ ಮಂಜುನಾಥ್ ಗೋವಿಂದ್ ರಾಜ್ ನಾಗರಾಜಯ್ಯ ದ್ರುವ ನಾರಾಯಣ್ ಅವರ ಅಭಿಮಾನಿ ಬಳಗದ ಯುವಕ ಮಿತ್ರರು ನಗರಸಭಾ ಸದಸ್ಯರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು