News Karnataka Kannada
Monday, April 29 2024
ಮೈಸೂರು

ಸಿಎಫ್‌ಟಿಆರ್‌ಐನಲ್ಲಿ ಗಮನ ಸೆಳೆದ ಮಖಾನ ಪಾನೀಯ

Makhana drink that caught the attention of CFTRI
Photo Credit : News Kannada

ಮೈಸೂರು: ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧಂನಾ ಸಂಸ್ಥೆ ವತಿಯಿಂದ ನಡೆಯುತ್ತಿರುವ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಸಂಸ್ಥೆಯೂ ಆವಿಷ್ಕರಿಸಿರುವ ವಿವಿಧ ಆಹಾರ ಸಂಬಂಧಿತ ತಂತ್ರಜ್ಞಾನ ಮಳಿಗೆ ಹಾಗೂ ನಾನಾ ಬಗೆಯ ಧಾನ್ಯ ಮತ್ತು ಸಿರಿಧಾನ್ಯಗಳ ಬಿತ್ತನೆ ಬೀಜಗಳ ಮಳಿಗೆಗಳು ಗಮನ ಸೆಳೆದವು.

ಸಿಎಫ್‌ಟಿಆರ್‌ಐ ಆವರಣದಲ್ಲಿ ಶುಕ್ರವಾರ ಅನಾವರಣಗೊಂಡ ಮಳಿಗೆಗಳಲ್ಲಿ ನಾರಿನಾಂಶ ಹಾಗೂ ಕಬ್ಬಿಣಾಂಶ ಹೊಂದಿರುವ ಮಖಾನ ಪಾನೀಯ, ರಾಗಿ ಮುದ್ದೆ ತಯಾರಿಸುವ ಯಂತ್ರ ಇರುವ ಮಳಿಗೆ ಸೇರಿದಂತೆ 70ಕ್ಕೂ ಹೆಚ್ಚು  ಮಳಿಗೆಗಳು ನೋಡುಗರಿಗೆ ಮಾಹಿತಿ ಒದಗಿಸಿದವು.

ಬೆಳವಾಡಿಯ ಪೌಷ್ಟಿಕ್ ಆಗ್ರೋ ಫುಡ್ ಪ್ರಾಡಕ್ಟ್ ಹೊರ ತಂದಿರುವ ಮಖಾನ ಪಾನಿಯ ಎಲ್ಲರ ಗಮನ ಸೆಳೆಯಿತು.  ಮಖಾನ ಎಂಬುದು ಕೆರೆಗಳಲ್ಲಿ ಕಾಣಸಿಗುವ ಒಂದು ಸಸಿ. ಬಿಹಾರದಲ್ಲಿ ಇದು ಹೆಚ್ಚು ಕಾಣಸಿಗುತ್ತದೆ. ಪ್ರೋಟಿನ್ ನಾರಿನಾಂಶ ಹಾಗೂ ಕಬ್ಬಿಣಾಂಶ ಹೊಂದಿರುವ ಇದರಿಂದ ಆರೋಗ್ಯಕರ ಪಾನೀಯ ಇದಾಗಿದೆ.

ಮಖಾನ ಕಡಿಮೆ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದ್ದು, ಮಧುಮೇಹಿ ಮತ್ತು ಹೃದ್ರೋಗಿಗಳಿಗೆ ಉತ್ತಮವಾದ ಈ ಲಘು ಆಹಾರ ರೋಗ ನಿಯಂತ್ರಣದಲ್ಲಿಡಲು ಸಹಕಾರಿಯಾಗಿರುತ್ತದೆ. ತೂಕ ಕಡಿಮೆ ಮಾಡುವ ಗುಣ ಹೊಂದಿದ್ದು, ದೇಹದಿಂದ ವಿಷ ಪದಾರ್ಥಗಳನ್ನು ಹೊರ ಹಾಕುತ್ತದೆ. ಬಿಪಿ, ಉರಿಯೂತಮ ಥೈರಾಯಿಡ್, ಕ್ಯಾನ್ಸರ್‌ನಂತಹ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಜತೆಗೆ 10 ನಿಮಿಷದಲ್ಲಿ¯ ರಾಗಿಮುದ್ದೆ ತಯಾರಿಸುವ ಯಂತ್ರ ಜನಾರ್ಕಷಣೆ ಕೇಂದ್ರಬಿಂದುವಾಗಿತ್ತು. ಕೇವಲ 10 ನಿಮಿಷದಲ್ಲಿ ಮುದ್ದೆ ಮಾಡಿ ತಿನ್ನಬಹುದು. ಇದರೊಂದಿಗೆ ರಾಗಿ ಪವರ್ ಪಂಚ್ ಹಾಗೂ ಎನರ್ಜಿ ಮಿಲೆಟ್ ರೊಟ್ಟಿ ಗಮನ ಸೆಳೆಯಿತು. ಅನಾನಸ್ ಸಿಪ್ಪೆಯಿಂದ ಮಾಡಿದ ಕೆ ಲೈಟ್ ಆಕ್ಟೀವ್ ಪಾನೀಯವನ್ನು ವಿದ್ಯಾರ್ಥಿಗಳು ಕೌತುಕದಿಂದ ವೀಕ್ಷಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು