News Karnataka Kannada
Tuesday, April 30 2024
ಮೈಸೂರು

ಕೆ.ಆರ್.ಪೇಟೆ: ರಾಜಕೀಯ ಮಾಡದೆ ಸಹಕಾರ ಸಂಘದ ಅಭಿವದ್ಧಿಗೆ ಶ್ರಮಿಸಿ

K R Pete
Photo Credit : By Author

ಕೆ.ಆರ್.ಪೇಟೆ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ರಾಜಕಾರಣ ಮಾಡದೆ ಆಡಳಿತ ಮಂಡಳಿ ರೈತರ ಏಳಿಗೆಗಾಗಿ ಶ್ರಮಿಸಬೇಕೆಂದು ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರುಗಳಾದ ಕೆ.ರವಿ ಡಾಲು ಹೇಳಿದರು.

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ನೂತನ ಬಿ.ಎಂ.ಸಿ ಘಟಕಕ್ಕೆ ಗುದ್ದಲಿ ಪೂಜೆ ಹಾಗೂ ಶಿವಪುರ, ಎಚ್.ಬಳ್ಳೇಕೆರೆ ಬೊಮ್ಮನಾಯಕನಹಳ್ಳಿ, ಚೌಡಘಟ್ಟ, ಗ್ರಾಮಗಳ ಉತ್ಪಾದಕರ ಅರಿವು ಕಾರ್ಯಕ್ರಮ ಸಭೆಗಳನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರಾದ ಕೆ.ರವಿ ಡಾಲು ಮತ್ತು ಎಚ್.ಟಿ.ಮಂಜು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮನ್ಮುಲ್ ನಿರ್ದೇಶಕ ಕೆ.ರವಿ ಡಾಲು ರವರು ಈ ಶುಭ ಸಮಯದಲ್ಲಿ ಶೀತಲೀಕರಣ ಘಟಕ ಕಟ್ಟಡ ಗುದ್ದಲಿ ಅರ್ಥಪೂರ್ಣವಾಗಿ ನೆರವೇರಿದೆ. ಶೀಘ್ರವೇ ಕಟ್ಟಡದ ಗುಣಮಟ್ಟದ ಕಾಮಗಾರಿಗೆ ಆಡಳಿತ ಮಂಡಳಿ ಶ್ರಮಿಸಿ, ಮತ್ತು ಕಾಲುಬಾಯಿ ಜ್ವರದಿಂದ ಬಳಲುತ್ತಿರುವ ರಾಸುಗಳ ರಕ್ಷಣೆಗಾಗಿ ಒಕ್ಕೂಟದಿಂದಲೇ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾವಿರಾರು ರೂ.ಮೌಲ್ಯದ ರಾಸುಗಳು ನಾನಾ ಕಾರಣಗಳಿಂದ ಮೃತಪಟ್ಟರೆ. ಅದರ ನಷ್ಟ ಭರಿಸಲು ಸಾಧ್ಯವಾಗದೆ ಪರದಾಡುತ್ತಿದ್ದ ರೈತರ ಅನುಕೂಲಕ್ಕಾಗಿ ವಿಮಾ ಯೋಜನೆ ಜಾರಿಗೆ ತರಲಾಗಿದ್ದು, ರಾಸು ಮೃತಪಟ್ಟರೆ 60 ಸಾವಿರ ರೂ. ಸಿಗುತ್ತದೆ. ಆದ್ದರಿಂದ ಉತ್ಪಾದಕರು ವಿಮೆ ಮಾಡಿಸಿ ಎಂದು ಸಲಹೆ ನೀಡಿದರು.

ಎಚ್.ಟಿ.ಮಂಜು ರವರು ಮಾತನಾಡಿ, ಪರಿಶುದ್ಧ ಹಾಲಿಗೆ ಉಪ್ಪು, ನೀರು, ಸಕ್ಕರೆ ಮಿಶ್ರಣ ಮಾಡಿ ಹಾಲಿನ ಡೇರಿಗೆ ಹಾಕುವುದು ಅಕ್ಷಮ್ಯ ಅಪರಾಧವಾಗಿದೆ. ಆಹಾರ ಸಂರಕ್ಷಣಾ ಕಾಯ್ದೆಯ ಅನ್ವಯ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇತ್ತೀಚೆಗೆ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲಿ ವಾರ್ಷಿಕವಾಗಿ ಆದಾಯ ನೋಡುವುದಾದರೆ, ಹೈನುಗಾರಿಕೆಯಲ್ಲಿ ಪ್ರತಿ 10 ದಿನಕ್ಕೆ ಒಮ್ಮೆ ನೇರವಾಗಿ ನಿಮ್ಮ ಖಾತೆಗೆ ಹಣ ಜಮಾ ಮಾಡುವುದರಿಂದ ಹೆಚ್ಚು ಹಣ ಸಂಪಾದಿಸಬಹುದು. ಹೈನುಗಾರಿಕೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಇದೆ ಎಂದರು.

ನಾವು ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಸಂಘಗಳಿಗೆ ತಾಲೂಕಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ತರುವುದಕ್ಕೆ ನಿಮ್ಮೆಲ್ಲರ ಪಾತ್ರ ಅಗತ್ಯವಿದೆ. ಹೈನುಗಾರಿಕೆ ಗಾಮೀಣ ಪ್ರದೇಶದ ರೈತರ ಬೆನ್ನೆಲುಬಾಗಿದೆ. ಪ್ರತಿದಿನ ಆದಾಯವನ್ನು ಹೊಂದಿರುವ ಸಂಸ್ಥೆ ಎಂದರೆ ತಪ್ಪಾಗಲಾರದು ಇಂತಹ ಉತ್ಪಾದಕರ ಹಿತಕಾಯುವ ಸಹಕಾರ ಕ್ಷೇತ್ರವನ್ನು ಉತ್ಪಾದಕರು ದೇಗುಲದಂತೆ ಕಾಣಬೇಕು ಮನವಿ ಮಾಡಿದರು. ಇದೇ ವೇಳೆ ರಾಸುಗಳ ಕೃತಕ ಗರ್ಭಧಾರಣೆ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ಎಸ್ ಆರ್ ಶರ್ಮ, ರಾಮೇಗೌಡ ರವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ಗುರುರಾಜ್ ಸುರಗ್ಗಿಹಳ್ಳಿ, ನಾಗಪ್ಪ ಅಲಿಬಾದಿ, ಶಿವಶಂಕರ್, ಅಧ್ಯಕ್ಷೆ ಪದ್ಮ, ಉಪಾಧ್ಯಕ್ಷೆ ರೇಣುಕಾ, ಸದಸ್ಯರಾದ ಸುಜಾತ, ಪ್ರೇಮ, ಪ್ರೇಮಿಳಾ, ತೇಜ, ರತ್ನ, ಮಂಜಮ್ಮ, ಮಂಜುಳಾ, ವಿಶಾಲು, ರೇಣುಕ, ರಾಧ ಶಿವಪುರ ಮುಖಂಡರಾದ ಮಂಜೇಗೌಡ ರಾಮೇಗೌಡ ಕೃಷ್ಣೇಗೌಡ, ಶಿವಲಿಂಗೇಗೌಡ, ಕೃತಕ ಗರ್ಭಧಾರಣೆಯ ಕಾರ್ಯಕರ್ತರಾದ ಜಯರಾಮ, ಚುಂಚೆಗೌಡ, ನಂದನ್ ಕುಮಾರ್, ಕರೋಟಿ ರಾಕೇಶ್, ಪ್ರಮೋದ, ನಿಂಗೇಗೌಡ, ಜಗನ್ನಾಥ, ಯೋಗೇಶ್, ಪುನೀತ್ ಕುಮಾರ್, ಸುಮಿತ್ರ, ಬಂಡಿಹೊಳೆ ರಾಮು, ಪ್ರವೀಣ ಮರಿಸ್ವಾಮಿ,ಎಸ್ ರಾಮೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು