News Karnataka Kannada
Thursday, May 02 2024
ಮೈಸೂರು

ದೇಶದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ: ಗೋವಿಂದ ಕಾರಾಜೋಳ

Congress' performance in india is zero: Govind Karjol
Photo Credit : By Author

ಎಚ್.ಡಿ.ಕೋಟೆ: ಕಾಂಗ್ರೆಸ್ ಪಕ್ಷದವರು ಬರೀ ಆರೋಪ ಮಾಡ್ತಾರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷದಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚು ಆಡಳಿತ ನಡೆಸಿದ್ದಾರೆ, ಏನ್ ಮಾಡಿದ್ದಾರೆ ಹೇಳಿ ಸಾಧನೆ ಶೂನ್ಯ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿ ಜನರಿಗೆ ಎಲ್ಲ ಭಾಗ್ಯಗಳನ್ನು ಕೊಟ್ಟದ್ದು ಭಾರತೀಯ ಜನತಾ ಪಾರ್ಟಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಾಜೋಳ ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ತಾಲ್ಲೂಕಿನಲ್ಲಿ ಮಳೆಯಿಂದ ಹಾನಿ ವೀಕ್ಷಣೆ ನಡೆಸಿ ಕಬಿನಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದರು ಕಾಂಗ್ರೆಸ್ ಪಕ್ಷದ ನಾಯಕರು ನಾವು ಆ ಭಾಗ್ಯ ಕೊಟ್ಟು ಈ ಭಾಗ್ಯ ಕೊಟ್ಟಿದ್ದೇವೆ ಎಂದು ರಾಜ್ಯದ ಜನತೆ ಮುಂದೆ ಸುಳ್ಳು ಹೇಳುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಯಾವ ಭಾಗ್ಯವನ್ನು ಕೊಟ್ಟಿಲ್ಲ ರಾಜ್ಯದಲ್ಲಿ ಕಾಂಗ್ರೆಸ್‌ಯೇತರ ಜನತಾ ಪಾರ್ಟಿ ಮತ್ತು ಭಾರತೀಯ ಜನತಾ ಪಾರ್ಟಿ ಸರ್ಕಾರ ಇದ್ದಾಗ ಬಡವರಿಗೆ ಅಗ್ಗದ ದರದಲ್ಲಿ ಪಡಿತರ ನೀಡಲು ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಯಿತು ಎಂದು ತಿಳಿಸಿದರು.

ಇನ್ನೂ ನಮ್ಮ ನಾಯಕರಾದ ಯಡಿಯೂರಪ್ಪವನರು ಮುಖ್ಯಮಂತ್ರಿಗಳಾಗಿದ್ದಾಗ ರೈತರು ಹೈನುಗಾರಿಕೆಯಲ್ಲಿ ತೋಡಗಿಸಿಕೊಳ್ಳಬೇಕು, ಹಾಲಿಗೆ ಪ್ರೋತ್ಸಾಹ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕ್ಷೀರ ಭಾಗ್ಯ ಜಾರಿಗೆ ತಂದರು ಹೀಗೆ ರೈತರಿಗೆ, ಬಡವರು ಹಾಗೂ ಏಳಿಗೆಗಾಗಿ ನಮ್ಮ ಪಕ್ಷ ಎಲ್ಲ ಭಾಗ್ಯಗಳನ್ನು ಜಾರಿಗೆ ತಂದಿದೆ, ಅದರೆ ಕಾಂಗ್ರೆಸ್ ನಾಯಕರು ನಾವು ಅನ್ನಭಾಗ್ಯ, ಕ್ಷೀರ ಭಾಗ್ಯ ತಂದಿದ್ದೇವೆ ಎಂದು ಜನರ ಬಳಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿದರು.

ದೀನ ದಲಿತರು, ಅಲ್ಪಾಸಂಖ್ಯಾತರಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿ ರಾಜಕಾರಣ ಮಾಡುತ್ತಿದ್ದಾರೆ, ರಾಜ್ಯದ ಜನರಿಗೆ ಯಾರು ಏನು ಮಾಡಿದ್ದಾರೆ ಎಂದು ತಿಳಿದಿದೆ, ಈಗ ದೀನ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಾಸಂಖ್ಯಾತರಲ್ಲಿ ಶೇ.70ರಷ್ಟು ಜನರು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿದ್ದಾರೆ, ದೇಶ ಭಾಗಶಃ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವುದೇ ಇದಕ್ಕೆ ಸಾಕ್ಷಿ, ನಾವು ಮತ್ತೆ 2023ರಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು, ಯಾರೇ ಸಂವಿಧಾನಿಕ ಹುದ್ದೆಯಲ್ಲಿರುವವರಿಗೆ ಅವಮಾನ ಮಾಡಬಾರದು, ಮೊಟ್ಟೆ ಎಸೆದಿರುವುದು ನಮ್ಮ ಪಕ್ಷದ ಕಾರ್ಯಕರ್ತನಲ್ಲ, ಆತನೇ ನಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದಾನೆ, ಬಿಜೆಪಿ ಶಾಸಕರ ಜೊತೆ ಇದ್ದ ಮಾತ್ರಕ್ಕೆ ಆತ ಬಿಜೆಪಿ ಪಕ್ಷದ ಕಾರ್ಯಕರ್ತ ಹೇಗೆ ಸಾಧ್ಯ, ಆತ ಆರ್‌ಎಸ್‌ಎಸ್ ಗಣವೇಷದಲ್ಲೂ ಕಾಣಿಸಿಕೊಂಡಿದ್ದರೂ, ಆರ್‌ಎಸ್‌ಎಸ್ ದೇಶದ ಏಕತೆ, ಐಕ್ಯತೆ, ಹಿಂದುತ್ವದ ಬಗ್ಗೆ ಚಿಂತಿಸುವ ಸಂಸ್ಥೆ, ಆರ್‌ಎಸ್‌ಎಸ್‌ನ ಎಲ್ಲರೂ ಬಿಜೆಪಿ ಕಾರ್ಯಕರ್ತರಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು