News Karnataka Kannada
Saturday, April 20 2024
Cricket
ಮೈಸೂರು

ಮೋದಿಯವರೊಂದಿಗೆ ದೇಶ ಸೇವೆ ಮಾಡುವ ಬಯಕೆ ಇದೆ: ಭಾಸ್ಕರ್ ರಾವ್

ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರಾಗಿದ್ದಾರೆ. ಅಂತಹ ಮಹಾನ್ ನಾಯಕರ ಅಧೀನದಲ್ಲಿ ನಾನೂ ಸಹ ದೇಶ ಸೇವೆ ಮಾಡಬೇಕೆಂಬ ಅದಮ್ಯ ಬಯಕೆ ಇದೆ. ತಾವೆಲ್ಲರೂ ಮೈಸೂರು-ಕೊಡಗು ಲೋಕಸಭೆಯಲ್ಲಿ ಸ್ಪರ್ಧೆ ಮಾಡಲು‌ ಸಮುದಾಯದ ಬೆಂಬಲ ನನಗೆ‌ ಬಹಳ ಮುಖ್ಯ ಎಂದು ಮೈಸೂರು ಕೊಡಗು ಲೋಕಸಭಾ ಆಕಾಂಕ್ಷಿಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
Photo Credit : News Kannada

ಮೈಸೂರು: ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರಾಗಿದ್ದಾರೆ. ಅಂತಹ ಮಹಾನ್ ನಾಯಕರ ಅಧೀನದಲ್ಲಿ ನಾನೂ ಸಹ ದೇಶ ಸೇವೆ ಮಾಡಬೇಕೆಂಬ ಅದಮ್ಯ ಬಯಕೆ ಇದೆ. ತಾವೆಲ್ಲರೂ ಮೈಸೂರು-ಕೊಡಗು ಲೋಕಸಭೆಯಲ್ಲಿ ಸ್ಪರ್ಧೆ ಮಾಡಲು‌ ಸಮುದಾಯದ ಬೆಂಬಲ ನನಗೆ‌ ಬಹಳ ಮುಖ್ಯ ಎಂದು ಮೈಸೂರು ಕೊಡಗು ಲೋಕಸಭಾ ಆಕಾಂಕ್ಷಿಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಆರಾಧ್ಯ ಮಹಾಸಭಾದಲ್ಲಿ ಬ್ರಾಹ್ಮಣ ಸಂಘಟನೆಗಳಿಂದ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಸಂವಾದದಲ್ಲಿ ಅವರು ಮಾತನಾಡಿ, ಬ್ರಾಹ್ಮಣ ಸಮುದಾಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಬ್ರಾಹ್ಮಣ ಸಮುದಾಯದ ಬಡವರನ್ನು ಉದ್ದಾರ ಮಾಡುವ ಕೆಲಸ ಮಾಡಬೇಕು. ಜೈನ್ ಮತ್ತು ಸಿಖ್ ಧರ್ಮದಲ್ಲಿ ಬಡವರನ್ನು ಮೇಲೆತ್ತಲು ಇಡೀ ಸಮುದಾಯದವರೇ ಟೊಂಕ ಕಟ್ಟಿ ನಿಲ್ಲುತ್ತಾರೆ. ಅಂತಹದ್ದೇ ಮನೋಭಾವ ಬ್ರಾಹ್ಮಣ ಸಮುದಾಯದಲ್ಲೂ ಬರಬೇಕು ಎಂದರು.

ಬ್ರಾಹ್ಮಣರಲ್ಲಿ ಸಂಸ್ಕಾರ ಮತ್ತು ಬುದ್ದಿವಂತಿಕೆ ಇದೆ. ಆದರೆ, ಆರ್ಥಿಕವಾಗಿ ದುರ್ಬಲರಾದವರೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಿತಿವಂತ ಬ್ರಾಹ್ಮಣರು ಬಡವರ ಬಗ್ಗೆ ಪ್ರೀತಿ ಮತ್ತು ಕಾಳಜಿ ಬರಬೇಕು. ನಾನು ಪೊಲೀಸ್ ಇಲಾಖೆಯಲ್ಲಿ ಸತತ 34 ವರ್ಷ ಕೆಲಸ ಮಾಡಿದ್ದೇನೆ. ಇಡೀ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ತೃಪ್ತಿ ನನಗಿದೆ. ನಾನೂ ಸಹ ಮೂಲತಃ ಮೈಸೂರು ಜಿಲ್ಲೆಯವನೇ, ನಂಜನಗೂಡು ತಾಲೂಕಿನ ಕಳಲೆ ನಮ್ಮ ಹುಟ್ಟೂರು. ನಮ್ಮ‌‌‌ ಪೂರ್ವಿಕರೆಲ್ಲರೂ ಮೈಸೂರಿನಲ್ಲೇ ನೆಲಸಿದ್ದರು. ನಮ್ಮ ತಾತ ಮೊದಲ‌ ಮಹಾ ಯುದ್ದದಲ್ಲಿ ಮೈಸೂರ್ ಲ್ಯಾನ್ಸರ್ ಸೇನೆಯಲ್ಲಿ ಅಶ್ವಪಡೆ ಸೈನಿಕರಾಗಿ ಇಸ್ರೇಲ್ ಗೆ ಹೋಗಿ ಹೋರಾಡಿ ಬಂದಿದ್ಧರೆಂದು ಸ್ಮರಿಸಿದರು.

ಮೈಸೂರು ಕೇವಲ ಸಾಂಸ್ಕೃತಿಕ ನಗರ ಮಾತ್ರ ಅಲ್ಲ. ಅತ್ಯಂತ ದೈರ್ಯ ಮತ್ತು ಆಕ್ರಮಣಕಾರಿ ಮನೋಭಾವ ಇಲ್ಲಿನ ಜನರಲ್ಲಿದೆ. ನಾನು ಮೈಸೂರು ಭಾಗದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದೇನೆ. ನಾನು ಸೇವೆ ಸಲ್ಲಿಸಿದ ಸಂದರ್ಭ ಯಾರದ್ದೂ ಒಂದು ಹನಿ ರಕ್ತ ಕೆಳಗೆ ಬೀಳದಂತೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೆನೆ. ರಾಜಕಾರಣಕ್ಕೆ ಬಂದಿರುವೆ, ಇಲ್ಲಿಯೂ ಸಹ ನನ್ನಿಂದ ಒಂದೇ ತಪ್ಪು ಆಗಲ್ಲ. ತಪ್ಪು ಮಾಡಲು ಭಯಪಡುವ ಸ್ವಭಾವ ನನ್ನದು. ಅವಕಾಶ ಸಿಕ್ಕರೆ ನೀವು ನಮ್ಮ ಮೇಲಿಟ್ಟಿರುವ ಭರವಸೆಯನ್ನು ಖಂಡಿತಾ ಉಳಿಸಿಕೊಳ್ಳುವೆ ಎಂದು ಹೇಳಿದರು.

ಭಾಷಣಕ್ಕೂ ಮುನ್ನ ನಡೆದ ಸಂವಾದದಲ್ಲಿ ವಿಪ್ರ ಮುಖಂಡರು ಈ ಬಾರಿ ಮೈಸೂರು ಲೋಕಸಭೆಯಿಂದ ಭಾಸ್ಕರ್ ರಾವ್ ಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿತು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರ 2.60. ಲಕ್ಷ ಮತಗಳಿವೆ. ಒಂದು ಬಾರಿಯೂ ಬ್ರಾಹ್ಮಣರಿಗೆ ಲೋಕಸಭೆ ಟಿಕೆಟ್ ನೀಡಿಲ್ಲ. ಈ ಬಾರಿ ಮೈಸೂರಿಗರೇ ಅಗಿರುವ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ಕೊಡಲಿ ಎಂದು ಸಭೆಯಲ್ಲಿ‌ ಒಕ್ಕೊರಲಿನ ಆಗ್ರಹ ಮಾಡಲಾಯಿತು. ಇದೇ ವೇಳೆ ವಿಪ್ರ ಸಮುದಾಯದ ಹಲವು ಮಂದಿಯನ್ನು ಗಣ್ಯರು ಸನ್ಮಾನಿಸಲಾಯಿತು.

ನಿಮ್ಮ ಭಾಸ್ಕರ್ ರಾವ್ ಎಂಬ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾದ ಕೇಶವಮೂರ್ತಿ, ಬ್ರಾಹ್ಮಣ ಸಭಾದ ಮುಖಂಡರಾದ ಪಾರ್ಥಸಾರಥಿ, ರವೀಂದ್ರ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು