News Karnataka Kannada
Monday, April 29 2024
ಮೈಸೂರು

ಮೈಸೂರು: ಮಾನವೀಯತೆ ಮೆರೆದ ಆಟೋ ಚಾಲಕ!

Mys
Photo Credit : By Author

ಮೈಸೂರು: ಚಾಲಕರೊಬ್ಬರು ಆಟೋದಲ್ಲೇ ಮರೆತು ಹೋಗಿದ್ದ ೬೦ ಸಾವಿರ ಮೌಲ್ಯದ ಮೊಬೈಲ್ ವಾಪಸ್ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕನನ್ನು ಪೊಲೀಸರು ಪ್ರಶಂಸಿದ್ದಾರೆ.

ಮೈಸೂರಿಗೆ ಪ್ರವಾಸಕ್ಕೆಂದು ಆಗಮಿಸಿದ್ದ ಬೆಂಗಳೂರಿನ ಮರಿಯಪ್ಪನ ಪಾಳ್ಯದ ಶ್ಯಾಮ್ ಎಂಬುವವರು ಜಗನ್ಮೋಹನ ಪ್ಯಾಲೆಸ್ ಹತ್ತಿರ ಬಾಡಿಗೆ ಆಟೋ ಹತ್ತಿ, ಜೂ ಹತ್ತಿರ ಇಳಿದುಕೊಂಡಿದ್ದು, ತಮ್ಮ ೬೦ ಸಾವಿರ ಮೌಲ್ಯದ ಒನ್ ಪ್ಲಸ್ ಮೊಬೈಲನ್ನು ಆಟೋದಲ್ಲಿಯೇ ಬಿಟ್ಟು ಹೋಗಿದ್ದರು.

ಈ ಸಂಬಂಧ ಶ್ಯಾಮ್ ಎಂಬುವವರು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಿದ್ದಾರ್ಥ ಸಂಚಾರ ಠಾಣೆಯ ಎಎಸ್‌ಐಗೆ ವಿಚಾರ ತಿಳಿಸಿದ್ದು, ಈ ಬಗ್ಗೆ ವಿಚಾರ ಮಾಡುತ್ತಿದ್ದಾಗ ಸದರಿ ಆಟೋ ರಿಕ್ಷಾದ ಚಾಲಕ ರಾಜು ಸ್ಥಳಕ್ಕೆ ವಾಪಸ್ ಬಂದು ಶ್ಯಾಮ್ ಅವರು ಆಟೋದಲ್ಲಿ ಬಿಟ್ಟು ಹೋಗಿದ್ದ ಮೊಬೈಲನ್ನು ಶ್ಯಾಮ್ ನೀಡಿದ್ದಾರೆ.

ಮೊಬೈಲ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿದ ಆಟೋ ಚಾಲಕನಿಗೆ ಪೊಲೀಸ್ ಇಲಾಖೆಯಿಂದ ಪ್ರಶಂಸಿಸಲಾಗಿದೆ. ರಾಜು ಅವರ ಸಮಯೋಚಿತ ವರ್ತನೆ ಮತ್ತು ಪ್ರಾಮಾಣಿಕತೆಯನ್ನು ಮೈಸೂರು ನಗರ ಪೊಲೀಸ್ ಘಟಕದಿಂದ ಶ್ಲಾಘಿಸಿದ್ದು, ಈ ಸಂಬಂಧ ಡಿಸಿಪಿ ಗೀತ ಪ್ರಸನ್ನ ರಾಜು ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು