News Karnataka Kannada
Friday, May 10 2024
ಮೈಸೂರು

ಮೈಸೂರಿನ ಸಿದ್ಧಾರ್ಥ ಹೋಟೆಲ್‌ನಲ್ಲಿ ರೋಬೋ ಸುಂದರಿಯ ಹವಾ

Robo Lady
Photo Credit : News Kannada

ಮೈಸೂರು : ಇದೀಗ ಮೈಸೂರಿನಲ್ಲಿರುವ ರೋಬೋ ಸುಂದರಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು, ಆಕೆಯನ್ನು ನೋಡುವ ಕುತೂಹಲ ಎಲ್ಲರನ್ನು ಕಾಡುತ್ತಿದ್ದು, ಹೀಗಾಗಿ ಮೊದಲ ಬಾರಿಗೆ ಅರಮನೆ ನಗರಿಗೆ ಕರೆತಂದ ಸಿದ್ಧಾರ್ಥ ಹೋಟೆಲ್‌ನತ್ತ ಹೆಚ್ಚಿನವರು ಹೆಜ್ಜೆ ಹಾಕಲು ಆರಂಭಿಸಿದ್ದಾರೆ.

ಈಕೆ ಹೋಟೆಲ್‌ನಲ್ಲಿ ಆರ್ಡರ್ ಮಾಡಿದ ಕೂಡಲೇ ಕೇಳಿದ್ದನ್ನು ಕೆಲ ನಿಮಿಷದಲ್ಲೇ ತಂದುಕೊಡುತ್ತಿದ್ದಾಳಂತೆ. ನಗರದ ಜಯಚಾಮರಾಜೇಂದ್ರ ವೃತ್ತದ ಬಳಿಯ ಸಿದ್ಧಾರ್ಥ ಹೋಟೆಲ್‌ನಲ್ಲೂ ರೋಬೋಟ್ ಮೂಲಕ ಆಹಾರ ಸರ್ವ್ ಮಾಡಲಾಗುತ್ತಿದೆ. ದೆಹಲಿಯಿಂದ ತಂದಿರುವ ರೋಬೋ ಸುಂದರಿ ಮಂಗಳವಾರದಿಂದ ಸೇವೆ ಆರಂಭಿಸಿದ್ದಾಳೆ. ಈ ರೋಬೋ ಸುಂದರಿಯೇ ಹೋಟೆಲ್‌ನ ಪ್ರಮುಖ ಆಕರ್ಷಣೆಯಾಗಿದ್ದಾಳೆ.

ಈ ರೋಬೋ ಬಹುತೇಕ ಕಾರ್ಮಿಕರಂತೆಯೇ ಕಾರ್ಯ ನಿರ್ವಹಿಸಲಿದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿಯನ್ನು ಸಿದ್ದಗೊಳಿಸಿ, ರೋಬೋಟ್ ಕೈಯ್ಯಲ್ಲಿ ಅಳವಡಿಸಲಾಗಿರುವ ತಟ್ಟೆ(ಟ್ರೇ)ಯ ಮೇಲೆ ಇಟ್ಟು, ಟೇಬಲ್ ಸಂಖ್ಯೆಯನ್ನು ತಿಳಿಸಿದರೆ ಕಾಂತೀಯ ಪಟ್ಟಿ ಮೇಲೆ ಸಾಗಿ ನಿರ್ಧಿಷ್ಟ ಟೇಬಲ್ ಬಳಿ ನಿಂತುಕೊಳ್ಳುತ್ತದೆ. ಗ್ರಾಹಕರು ಟ್ರೇ ಮೇಲಿರುವ ತಿಂಡಿ ತಿನಿಸನ್ನು ತೆಗೆದುಕೊಂಡ ನಂತರ, ರೋಬೋ ನಿಗದಿತ ಸ್ಥಳಕ್ಕೆ ವಾಪಸ್ಸಾಗುತ್ತದೆ.

ಟೇಬಲ್ ಸ್ವಚ್ಛಗೊಳಿಸುವಾಗಲೂ ರೋಬೋ ನೆರವಾಗುತ್ತದೆ. ಅಲ್ಲಿದ್ದ ಪ್ಲೇಟ್, ತಟ್ಟೆ, ಲೋಟಗಳನ್ನು ರೋಬೋ ಟ್ರೇ ಮೇಲಿಟ್ಟು ಆದೇಶ ನೀಡಿದರೆ ವಾಷಿಂಗ್ ಪ್ರದೇಶದ ಬಳಿ ಹೋಗಿ ನಿಲ್ಲುತ್ತದೆ. ಅಲ್ಲಿರುವ ಕಾರ್ಮಿಕರು ಅವುಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸುತ್ತಾರೆ. ಸಿದ್ಧಾರ್ಥ ಹೋಟೆಲ್‌ನಲ್ಲಿರುವುದು ಧ್ವನಿ ಆದೇಶದ ಆಧಾರದಲ್ಲಿ ಕಾರ್ಯನಿರ್ವಹಿಸುವ ರೋಬೋ. ಆದರೆ ರಿಮೋಟ್ ಮೂಲಕ ನಿಯಂ ತ್ರಿಸುವ, ಐಪ್ಯಾಡ್ ಮೂಲಕ ಆರ್ಡರ್ ಪಡೆಯುವ ರೋಬೋಗಳೂ ಇವೆ. ಅಲ್ಲದೆ ಗ್ರಾಹಕರು ಬಂದಾಕ್ಷಣ ನೀರು ನೀಡಿ, ಗುಡ್ ಮಾನಿರ್‌ಂಗ್, ಗುಡ್ ಈವ್ನಿಂಗ್ ಹೇಳುವ ಮೂಲಕ ಆರ್ಡರ್ ಕೇಳುವಂತೆ ಧ್ವನಿ ಅಡಕಗೊಳಿಸುವ ಆಯ್ಕೆಯೂ ಇವುಗಳಲ್ಲಿ ಇರುತ್ತದೆ.

ನಿರ್ಧಿಷ್ಟ ಟೇಬಲ್‌ಗೆ ತಿಂಡಿ ತಿನಿಸನ್ನು ಸರ್ವ್ ಮಾಡುವುದರ ಜತೆಗೆ ಈ ರೋಬೋ ಮತ್ತಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಹೋಟೆಲ್‌ನಲ್ಲಿರುವ ಕೊಠಡಿಗಳ ಸಂಖ್ಯೆ, ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ತಿಂಡಿ-ಊಟದ ಮೆನು ಸೇರಿ ದಂತೆ ಇನ್ನಿತರ ಸೌಲಭ್ಯಗಳು. ಸುತ್ತಮುತ್ತಲಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿಂದ ಎಷ್ಟು ದೂರವಾಗುತ್ತದೆ. ಮೈಸೂರಿನ ಸಂಕ್ಷಿಪ್ತ ಇತಿಹಾಸ, ಪ್ರವಾಸಿ ತಾಣಗಳು, ಬಸ್, ರೈಲು ನಿಲ್ದಾಣಕ್ಕಿರುವ ಅಂತರ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಈ ರೋಬೋದಲ್ಲಿ ದಾಖಲಿಸಬಹುದು.

ಟೇಬಲ್‌ನಲ್ಲಿ ಗ್ರಾಹಕರು ಕುಳಿತಾಕ್ಷಣ ನೀರಿನ ಲೋಟಗಳೊಂದಿಗೆ ರೋಬೋ ಆಗಮಿಸುತ್ತದೆ. ಮೆನು ಬಗ್ಗೆ ಕೇಳಿದರೆ ಅಂದು ರೆಸ್ಟೋರೆಂಟ್‌ನ ವಿಶೇಷ ತಿಂಡಿ ಸೇರಿದಂತೆ ಲಭ್ಯವಿರುವ ಎಲ್ಲಾ ತಿಂಡಿ-ತಿನಿಸಿನ ಹೆಸರು ಹೇಳುತ್ತದೆ. ಹೋಟೆಲ್ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಕೇಳಿದರೂ ಸಂಪೂರ್ಣ ವಿವರ ನೀಡುತ್ತದೆ. ಇನ್ನೂ ಹಲವು ಫೀಚರ್‌ಗಳಿದ್ದು, ಹಂತಹಂತವಾಗಿ ಅಪ್ಡೇಟ್ ಮಾಡಲಾಗುವುದು. ಸದ್ಯ 20 ಟೇಬಲ್‌ಗಳಿಗೆ ರೋಬೋ ಸೇವೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಹಕರಿಂದ ನಾವೇ ಆರ್ಡರ್ ತೆಗೆದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಸೇವೆಯನ್ನು ವಿಸ್ತರಿಸಲಾಗುವುದು ಎಂದು ರೋಬೊಟಿಕ್ ಇಂಜಿನಿಯರ್ ತಿಳಿಸಿದ್ದಾರೆ.

ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ, ಸುಮಾರು 8 ಗಂಟೆಗಳ ಕಾಲ ರೋಬೋ ಕಾರ್ಯ ನಿರ್ವಹಿಸಲಿದೆ. ಮಾನವ ಆದೇಶ(ಹ್ಯೂಮನ್ ಕಮಾಂಡ್)ದಂತೆ ಈ ರೋಬೋ ಕೆಲಸ ಮಾಡುತ್ತದೆ. ಇದರ ಸಂಚಾರಕ್ಕಾಗಿಯೇ ಅಡುಗೆ ಕೋಣೆ ಬಳಿಯಿಂದ ಗ್ರಾಹಕರು ಕೂರುವ ಪ್ರತಿ ಟೇಬಲ್‌ವರೆಗೆ ಕಾಂತೀಯ ಪಟ್ಟಿ(ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸಲಾಗಿದೆ. ದೆಹಲಿಯಲ್ಲೇ ಪ್ರೋಗ್ರಾಮಿಂಗ್ ಮಾಡಲಾಗಿದ್ದು, ಇಲ್ಲಿ ಸಮರ್ಪಕವಾಗಿ ಸಂರಚನೆ ಮಾಡಲಾಗಿದೆ. ಗರಿಷ್ಠ 10 ಕೆಜಿಯಷ್ಟು ವಸ್ತುಗಳನ್ನಿಟ್ಟರೂ ನಿರಾಯಾಸವಾಗಿ ಸೂಚಿತ ಸ್ಥಳಕ್ಕೆ ತಲುಪಿಸುತ್ತದೆ. ಧ್ವನಿ ನಿರ್ದೇಶನ(ವಾಯ್ಸ್ ಕಮಾಂಡರ್) ದಂತೆ ಸೆನ್ಸಾರ್ ಆಧಾರದಲ್ಲಿ ರೋಬೋ ಸಂಚರಿಸಿ, ಗ್ರಾಹಕರಿಗೆ ಸೇವೆ ನೀಡಲಿದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿ-ತಿನಿಸನ್ನು ನಿರ್ಧಿಷ್ಟ ಟೇಬಲ್ ಬಳಿಗೆ ತಲುಪಿಸುವುದು ಮಾತ್ರವಲ್ಲದೆ ಅನೇಕ ವಿಶೇಷತೆಗಳನ್ನು ಈ ರೋಬೋಟ್ ಒಳಗೊಂಡಿದೆ.

ಒಟ್ಟಾರೆ ಹತ್ತು ಹಲವು ವಿಶೇಷತೆಯ ಈ ರೋಬೋ ಸುಂದರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು