News Karnataka Kannada
Monday, April 29 2024
ಮೈಸೂರು

ಮೈಸೂರಿನ ಕಾಂಗರೂ ಕೇರ್‌ ನಲ್ಲಿ ತ್ರಿವಳಿ ಜನನ

Mysore (1)
Photo Credit :

ಮೈಸೂರು: ನಗರದ ಕಾಂಗರೂ ಕೇರ್‌ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕ್ಲಿನಿಕ್‌ ಮತ್ತು ಫರ್ಟಿಲಿಟಿ ಸೆಂಟರ್‌ನಲ್ಲಿ ತ್ರಿವಳಿ ಮಕ್ಕಳ ಜನನವಾಗಿದೆ. ಅವಧಿಗೂ ಮುನ್ನ ಜನಿಸಿರುವ ತ್ರಿವಳಿ ಮಕ್ಕಳು ಆರೋಗ್ಯಕರವಾಗಿವೆ ಎಂದು ಆಸ್ಪತ್ರೆಯ ವತಿಯಿಂದ  ತಿಳಿಸಲಾಗಿದೆ.

30 ವಾರಗಳ(ಗರ್ಭಧಾರಣೆಯ 7ನೇ ತಿಂಗಳು) ತ್ರಿವಳಿ ಮಕ್ಕಳನ್ನು ಪ್ರಸೂತಿ ತಜ್ಞರಾದ ಡಾ. ಲೀಲಾವತಿ ಅವರು ತುರ್ತು  ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿದರು. ಮೂರು ಮಕ್ಕಳನ್ನು NICUನಲ್ಲಿ ಇರಿಸಲಾಗಿದ್ದು, ನಿಯೋನಾಟಾಲಜಿಸ್ಟ್‌ ಡಾ. ನಂದಿತಾ ಅವರು ತ್ರಿವಳಿ ನವಜಾತ ಶಿಶುಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಿಯೋನಾಟಾಲಜಿ ಎಂಬುದು ನವಜಾತ ಶಿಶುಗಳ ಕುರಿತು ಹೆಚ್ಚಿನ ನಿಗಾವಹಿಸುವ ವಿಶೇಷ ಘಟಕವಾಗಿದೆ.

ತ್ರಿವಳಿ ಗರ್ಭಧಾರಣೆಯು ಸಾಕಷ್ಟು ಸಂಕೀರ್ಣವಾಗಬಹುದು. ಹೀಗಾಗಿ ಗರ್ಭಿಣಿ ತಾಯಿಗೆ ಹೆಚ್ಚಿನ ಕಾಳಜಿ ಜೊತೆಗೆ ತಾಯಿ  ಮತ್ತು ಶಿಶುಗಳು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳ ಅಗತ್ಯವಿದೆ. ಹಲವು ತ್ರಿವಳಿ ಮಕ್ಕಳ ಗರ್ಭಧಾರಣೆ ಅವಧಿಗೂ ಮುನ್ನವೇ ಆಗಲಿದೆ ಎಂದು ಡಾ. ಲೀಲಾವತಿ ಅವರು ವಿವರಿಸಿದ್ದಾರೆ. ತ್ರಿವಳಿ ಮಕ್ಕಳಿಗೆ ಜನ್ಮನೀಡಿದ ತಾಯಿ ಲಕ್ಷ್ಮಿ ಅವರ ಮೇಲೆ ನಿರಂತರವಾಗಿ ನಿಗಾವಹಿಸಿ, ಸಲಹೆಗಳನ್ನು ನೀಡಲಾಗಿತ್ತು. ಹೀಗಾಗಿ ಲಕ್ಷ್ಮಿ ಅವರ ಸಂಕಲ್ಪ ಮತ್ತು ಡಾ. ಲೀಲಾವತಿ ಅವರ ಪರಿಶ್ರಮದಿಂದಾಗಿ ಲಕ್ಷ್ಮಿ ಅವರ ಗರ್ಭಾವಸ್ಥೆ ಅವಧಿಯನ್ನು 7ನೇ ತಿಂಗಳವರೆಗೆ ಮುಂದೂಡಲು ಸಾಧ್ಯವಾಯಿತು.

ತಾಯಿಯು ಅವಧಿಗೂ ಮುನ್ನ ಹೆರಿಗೆಗೆ ಒಳಗಾದಾಗ, ಶಿಶುಗಳ ಶ್ವಾಸಕೋಶ ಮತ್ತು ಮೆದುಳಿನ ರಕ್ಷಣೆಗಾಗಿ ಔಷಧಗಳನ್ನು  ನೀಡಲಾಯಿತು. ಅಲ್ಲದೆ ಮಕ್ಕಳು ಅವಧಿಗೂ ಮುನ್ನವೇ ಜನಿಸಿದ್ದರಿಂದ ಮತ್ತು ಕಡಿಮೆ ಜನನ ತೂಕ(ತಲಾ ಅಂದಾಜು 1.3 ಕೆಜಿ) ಹೊಂದಿದ್ದರಿಂದ ತ್ರಿವಳಿ ಮಕ್ಕಳನ್ನುNICU ಗೆ ದಾಖಲಿಸಲಾಗಿದೆ. ಮೂರು ಮಕ್ಕಳಲ್ಲಿ ಒಂದು ಮಗುವಿಗೆ ಉಸಿರಾಟದ ಸಮಸ್ಯೆ ಇದ್ದು, ಇದಕ್ಕಾಗಿ ಕೃತಕ ಉಸಿರಾಟದ ಸಪೋರ್ಟ್‌ ನೀಡಲಾಗಿದೆ. ಮಗುವಿನಲ್ಲಿ ಅಗತ್ಯಕ್ಕೆ ತಕ್ಕಂತೆ ಶ್ವಾಸಕೋಶಗಳು ಅಭಿವೃದ್ಧಿಯಾಗದ ಶ್ವಾಸಕೋಶಗಳು ಸಮರ್ಪಕ ಉಸಿರಾಟವನ್ನು ನಿರ್ವಹಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಲಭ್ಯವಿರುವ ಅತ್ಯುತ್ತಮ ಉಪಕರಣಗಳ ಮತ್ತು ತಂತ್ರದೊಂದಿಗೆ ಅವುಗಳನ್ನು ನಿರ್ವಹಿಸಲಾಗಿದೆ. ಇವೆಲ್ಲದರ ಪರಿಣಮವಾಗಿ ಅಂದಾಜು 3 ವಾರಗಳ ಕಾಲ ಶಿಶುಗಳ ಬಗ್ಗೆ ನಿಗಾವಹಿಸಿದ್ದರಿಂದಾಗಿ, ತ್ರಿವಳಿ ಮಕ್ಕಳು ಆರೋಗ್ಯವಾಗಿದ್ದು, ತಲಾ 1.6 ಕೆಜಿ ತೂಕದೊಂದಿಗೆ ಮೂರು ಮಕ್ಕಳನ್ನು ಡಿಸ್ಚಾರ್ಜ್‌ ಮಾಡಲಾಯಿತು ಎಂದು ಮೈಸೂರಿನ ಕಾಂಗೂರು ಕೇರ್‌ ಆಸ್ಪತ್ರೆಯ ನಿಯೋನಾಟಾಲಜಿಸ್ಟ್‌ ಡಾ. ನಂದಿತಾ ತಿಳಿಸಿದ್ದಾರೆ.

ತ್ರಿವಳಿ (ಎರಡು ಗಂಡು ಮತ್ತು ಒಂದು ಹೆಣ್ಣು) ಮಕ್ಕಳಿಕೆ ಜನ್ಮ ನೀಡಿದ ಲಕ್ಷ್ಮಿ ಮೂರು ಮಕ್ಕಳನ್ನು ಸಂತಸದಿಂದ ಸ್ವಾಗತಿಸಿದ್ದಾರೆ. ತಾನು ತ್ರಿವಳಿ ಮಕ್ಕಳಿಗೆ ಗರ್ಭಿಣಿಯಾಗಿರುವ ಬಗ್ಗೆ ಸ್ಕ್ಯಾನಿಂಗ್‌ ಮೂಲಕ ತಮಗೆ ತಿಳಿಯಿತು. ಆರಂಭಿಕ ದಿನಗಳಲ್ಲಿ ಬೇರೆ  ವೈದ್ಯರಿಗೆ ತೋರಿಸಲಾಗುತ್ತಿತ್ತು. ಆದರೆ ಅವರು ನನಗೆ ಆತ್ಮವಿಶ್ವಾಸ ತುಂಬಲಿಲ್ಲ ಮತ್ತು ಮೂರು ಶಿಶುಗಳು ಬದುಕುಳಿಯುವ ಬಗ್ಗೆ ಖಚಿತಪಡಿಸಲಿಲ್ಲ.

ಹೀಗಾಗಿ ತ್ರಿವಳಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಗುಣಮಟ್ಟದ ಆರೋಗ್ಯ ರಕ್ಷಣೆಗಾಗಿ, ನಾನು ಅತ್ಯುತ್ತಮ ಆಸ್ಪತ್ರೆಗಾಗಿ ಗೂಗಲ್‌ನಲ್ಲಿ ಹುಡುಕಿದೆ. ಆ ಸಂದರ್ಭದಲ್ಲಿ ಕಾಂಗರೂ ಕೇರ್‌ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಹೆರಿಗೆ ಮಾಡಿದ್ದ ವಿಷಯ ನನಗೆ ತಿಳಿಯಿತು. ಆದ್ದರಿಂದ ಕೂಡಲೇ ನಾನು ಆಸ್ಪತ್ರೆಯನ್ನು ಸಂಪರ್ಕಿಸಿ, ಡಾ. ಲೀಲಾವತಿ ಅವರನ್ನು ಭೇಟಿಯಾದೆ.

ಅವರು ನೀಡಿದ ಸಲಹೆಗಳನ್ನು ಅನುಸರಿಸಿದ ನಂತರ ನಾನು 30 ವಾರಗಳಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮನೀಡಿದ್ದೇನೆ. ಮೂರು ಮಕ್ಕಳ ತೂಕವನ್ನು ಹೆಚ್ಚಿಸಲು, 23 ದಿನಗಳ ಕಾಲ ಮಕ್ಕಳನ್ನು NICUನಲ್ಲಿ ಇರಿಸಲಾಯಿತು.  ಸದ್ಯ ಮೂರು ಮಕ್ಕಳ ಆರೋಗ್ಯ ಉತ್ತಮವಾಗಿದ್ದು, ಇದಕ್ಕಾಗಿ ಆಸ್ಪತ್ರೆ ಸಿಬ್ಬಂದಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದು ಲಕ್ಷ್ಮಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು