News Karnataka Kannada
Saturday, May 04 2024
ಮೈಸೂರು

ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಜನಸಾಗರ

Chamundibetta
Photo Credit :

ಮೈಸೂರು: ಹೊಸವರ್ಷದ ಮಾರನೆ ದಿನ ಹಾಗೂ ವೀಕೆಂಡ್ ಆದ ಭಾನುವಾರ ಚಾಮುಂಡಿಬೆಟ್ಟಕ್ಕೆ ಭಕ್ತರು ಸೇರಿದಂತೆ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದು, ಕಂಡು ಬಂದಿತು.

ಮುಂಜಾನೆ ಐದು ಗಂಟೆಯಿಂದಲೇ ಭಕ್ತರು ಸೇರಿದಂತೆ ಪ್ರವಾಸಿಗರು ಚಾಮುಂಡಿಪಾದದ ಮೂಲಕ ಸಾವಿರ ಮೆಟ್ಟಿಲುಗಳನ್ನೇರಿ ವೀವ್ ಪಾಯಿಂಟ್ ಗಳಲ್ಲಿ ಕುಳಿತು ವೀಕ್ಷಣೆ ಮಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದ ದೃಶ್ಯಗಳು ಕಾಣಿಸುತ್ತಿದ್ದವು.

ಪ್ರತಿದಿನವೂ ಜನ ಮೆಟ್ಟಿಲನ್ನೇರಿ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ನಮಿಸಿ ಬರುವವರಿದ್ದಾರೆ. ಕೆಲವರಿಗೆ ಇದೊಂದು ರೀತಿಯ ಜಾಗಿಂಗ್ ಕೂಡ ಆಗಿದೆ. ಈ ಬಾರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರಿಂದ ಹೆಚ್ಚಿನ ಜನ ಚಾಮುಂಡಿಬೆಟ್ಟದತ್ತ ಆಗಮಿಸಿದ್ದಾರೆ.

ಇನ್ನು ಮೈಸೂರು ನಗರದಲ್ಲಿಯೂ ಪ್ರವಾಸಿಗರು ಕಾಣಿಸುತ್ತಿದ್ದು, ವಸ್ತುಪ್ರದರ್ಶನ, ಅರಮನೆ ಆವರಣದ ಫಲಪುಷ್ಪಪ್ರದರ್ಶನ ಆವರಣ ಸೇರಿದಂತೆ ವಿವಿಧೆಡೆ ಜನ ಸಾಗರವೇ ಕಂಡು ಬರುತ್ತಿದೆ. ಒಟ್ಟಾರೆ ಜನ ವೀಕೆಂಡ್ ಮಸ್ತಿಯಲ್ಲಿರುವುದಂತು ನಿಜ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು