News Karnataka Kannada
Monday, May 06 2024
ಮೈಸೂರು

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವಿವಾಹವಾಗಿದ್ದ ಯುವಕನ ಬಂಧನ!

Jail
Photo Credit :

ಮೈಸೂರು:  ಮದುವೆ ಮನೆಯಿಂದ ಅಪ್ರಾಪ್ತಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಬೇಲೂರು ಗ್ರಾಮದ ಪ್ರತಾಪ್ ಬಂಧಿತ ಆರೋಪಿ. ಸಂಬಂಧಿಕರ ಮದುವೆಗೆಂದು ತನ್ನ ಪೋಷಕರೊಂದಿಗೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿರುವ ಶಿವಮ್ಮಮಹದೇವಪ್ಪ ಕಲ್ಯಾಣ ಮಂಟಪಕ್ಕೆ ಬಂದು ತಂಗಿದ್ದ ಬಾಲಕಿಯನ್ನು ಪ್ರತಾಪ್ ಅಪಹರಿಸಿಕೊಂಡು ಹೋಗಿದ್ದ. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ತಕ್ಷಣವೇ ಕಾರ್ಯಚರಣೆ ನಡೆಸಿದ ಮೈಸೂರಿನ ವಿವಿಪುರಂ ಠಾಣೆಯ ಪೊಲೀಸರು, ತನಿಖೆ ನಡೆಸಿದಾಗ, ಮಂಡ್ಯ ಜಿಲ್ಲೆ ಬೇಲೂರು ಗ್ರಾಮದ ಪ್ರತಾಪ್ ಅಪ್ರಾಪ್ತೆಯನ್ನ ಅಪಹರಿಸಿಕೊಂಡು ಹೋಗಿ ಮಂಡ್ಯದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆಯಾಗಿರುವುದು ಪತ್ತೆಯಾಯಿತು. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು, ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡು, ಬಾಲಕಿಯನ್ನು ರಕ್ಷಿಸಿ, ಬಾಲಮಂದಿರದ ವಶಕ್ಕೆ ಆಕೆಯನ್ನು ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು