News Karnataka Kannada
Thursday, May 09 2024
ಮೈಸೂರು

ಆನ್ಲೈನ್ ಸ್ನೇಹ: ಅಪ್ರಾಪ್ತ ಯುವಕ ನೊಂದಿಗೆ ಮದುವೆಯಾಗಲು‌ ಮುಂದಾದ ಮಹಿಳೆ!

Marriage
Photo Credit :

ಮೈಸೂರು: ಮೂವತೈದರ ಮಹಿಳೆ ಗಂಡ ಮತ್ತು ಮೂವರು ಮಕ್ಕಳನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಅಪ್ರಾಪ್ತ ಯುವಕನ ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೂವತ್ತೈದು ವರ್ಷ ಪ್ರಾಯದ ಮೂವರು ಮಕ್ಕಳ ತಾಯಿಯೊಬ್ಬಳು  13 ವಯಸ್ಸಿನ ಅಪ್ರಾಪ್ತ ಯುವಕ ನೊಂದಿಗೆ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ್ದಲ್ಲದೆ, ಆತನೊಂದಿಗೆ ದೈಹಿಕ ಸಂಪರ್ಕ ಹೊಂದಿ ಇದೀಗ ಗಂಡ ಮಕ್ಕಳು ಎಲ್ಲರನ್ನು ಬಿಟ್ಟು ಆತನೊಂದಿಗೆ ಸಂಸಾರ ನಡೆಸುವ ಹಠಕ್ಕೆ ಬಿದ್ದಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬಾಲಕನೊಂದಿಗೆ ಚಾಟ್ ಮಾಡುತ್ತಿದ್ದ ಮಹಿಳೆ ತಾನು ವಿವಾಹಿತೆ ತನಗೆ,  13 ವರ್ಷ ವಯಸ್ಸಿನ ಮಗಳು ಸೇರಿದಂತೆ ಮೂವರು ಮಕ್ಕಳು ಇದ್ದಾರೆ ಎಂಬುದನ್ನು ಮರೆತು ಆತನೊಂದಿಗೆ ಪ್ರಣಯ ಶುರು ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತನನ್ನು ಭೇಟಿಯಾಗಿ ದೈಹಿಕ  ಸಂಪರ್ಕ ಹೊಂದಿದ್ದಾಳೆ. ಬಳಿಕ ಆತನಿಗೆ ನಾನು ಗಂಡ, ಮಕ್ಕಳನ್ನು ಬಿಟ್ಟು ಬರುತ್ತೇನೆ ನೀನು ನನ್ನನ್ನು ಮದುವೆಯಾಗು ಎಂದು ಹಠ ಹಿಡಿದಿದ್ದಾಳೆ.

ಆಂಟಿಯನ್ನು ಪಟಾಯಿಸಿ ದೈಹಿಕ ಬಯಕೆ ತೀರಿಸಿಕೊಂಡು ಜಾಲಿಯಾಗಿರ ಬಹುದೆಂದು ನಂಬಿದ್ದ ಅಪ್ರಾಪ್ತ ಯುವಕನಿಗೆ ಅವಳು ಮದುವೆಯಾಗುವಂತೆ ಹಠ ಹಿಡಿದಾಗ ಆಕಾಶವೇ ಕಳಚಿ ತಲೆ ಬಿದ್ದಂತಾಗಿದೆ. ಹೀಗಾಗಿ ಆಕೆಯಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲದೆ, ಮನೆ ಬಿಟ್ಟು ಹೊರ ಹೋಗಿದ್ದನು. ಆದರೆ ಅವನ ವ್ಯಾಮೋಹಕ್ಕೆ ಬಿದ್ದ ಅವಳು ಮಾತ್ರ ಸುಮ್ಮನಿರದೆ ಅವನನ್ನು ಹುಡುಕಿಕೊಂಡು ಮನೆಗೆ ತೆರಳಿದ್ದಲ್ಲದೆ, ಆತನನ್ನೇ ವಿವಾಹ ಮಾಡಿಕೊಡುವಂತೆ ಮನೆಯವರೊಂದಿಗೆ ಪಟ್ಟು ಹಿಡಿದ್ದಾಳೆ.

ಬಾಲಕನ ಮನೆಯವರು, ಊರಿನವರು ಎಷ್ಟೇ ಬುದ್ದಿ ಹೇಳಿದರೂ ಒಪ್ಪದ ಮಹಿಳೆ ನನಗೆ ಆತನೇ ಬೇಕೆಂದು ಹಠಕ್ಕೆ ಬಿದ್ದಿದ್ದಾಳೆ. ಇದೀಗ ಹೆದರಿದ ಅಪ್ರಾಪ್ತ ಯುವಕನ ಮನೆಯವರು ಮಹಿಳೆಯಿಂದ ತಮ್ಮ ಮಗನನ್ನು ರಕ್ಷಿಸಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು