News Karnataka Kannada
Monday, April 29 2024
ಮೈಸೂರು

ಮೈಸೂರು: ಸಿದ್ಧರಾಮಯ್ಯನವರ ಧ್ವನಿ ಗಟ್ಟಿಗೊಳಿಸಲು ಡಾ. ಹೆಚ್.ಸಿ. ಮಹದೇವಪ್ಪ ಮನವಿ

To strengthen the voice of Siddharamaiah, Dr. H.C. Mahadevappa's appeal
Photo Credit :

ಮೈಸೂರು:  ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿರುವುದರಿಂದ ಸಿದ್ಧರಾಮಯ್ಯನವರ ಧ್ವನಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಆಡಳಿತ ನೀತಿ ನಿರ್ಧಾರ ಗ್ರಂಥ  ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಮನವಿ ಮಾಡಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜನಮನ ಪ್ರತಿಷ್ಠಾನ ಬೆಂಗಳೂರು ವತಿಯಿಂದ ‘ಸಿದ್ಧರಾಮಯ್ಯ ಆಡಳಿತ ನೀತಿ ನಿರ್ಧಾರ’ ಗ್ರಂಥ ಬಿಡುಗಡೆಯನ್ನು ಜು.23 ಶನಿವಾರ ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದು ಮೂರು ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಸಿದ್ದರಾಮಯ್ಯನವರು 75ವರ್ಷಗಳನ್ನು ಪೂರೈಸಿದ್ದು 45ವರ್ಷ ಸಾರ್ವಜನಿಕ ಜೀವನದಲ್ಲೆ ಸೇವೆ ಸಲ್ಲಿಸಿದ್ದಾರೆ ಎಂದ ಅವರು ಸಿದ್ಧರಾಮಯ್ಯನವರು ಮೇರು ಪರ್ವತವಿದ್ದಂತೆ ಅವರನ್ನು  ಕುರಿತಂತೆ ಹಲವಾರು ಲೇಖಕರು ಲೇಖನಗಳನ್ನು ಬರೆದು ಪುಸ್ತಕದ ರೂಪದಲ್ಲಿ ತರುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ. ಯತೀಂದ್ರ ಸಿದ್ಧರಾಮಯ್ಯ, ಡಾ. ತಿಮ್ಮಯ್ಯ, ಮಂಜುನಾಥ್, ಅನಿಲ್ ಚಿಕ್ಕಮಾದು, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಾಮಪ್ಪ, ಮಾಜಿ ಲೋಕ ಸಭಾ ಸದಸ್ಯ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಎಂ.ಕೆ. ಸೋಮಶೇಖರ್, ಕೃಷ್ಣಪ್ಪ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಪ್ರೋ. ನಂಜರಾಜ ಅರಸ್, ಪುಸ್ತಕದ ಸಂಪಾದಕರಾದ ಕಾ.ತ. ಚಿಕ್ಕಣ್ಣ, ಸಂಯೋಜಕರಾದ ಎಂ. ರಾಮಯ್ಯ, ಚಂದ್ರೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಕೆ. ಮರೀಗೌಡ, ಬಿ.ಎಂ. ರಾಮು, ಕಾಂಗ್ರೆಸ್ ವಕ್ತಾರರಾದ ಎಂ. ಲಕ್ಷ್ಮಣ್, ಜಿ.ಪಂ. ಮಾಜಿ ಸದಸ್ಯರಾದ ಡಿ. ರವಿಶಂಕರ್, ಮಾರುತಿ ಮುಖಂಡರಾದ ಹರೀಶ್‌ಗೌಡ, ಗಣೇಶ್‌ಪ್ರಸಾದ್, ನಗರ ಪಾಲಿಕೆ ಮಾಜಿ ಸದಸ್ಯ  ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಹರೀಶ್‌ಮೊಗಣ್ಣ, ಜಯರಾಮೇಗೌಡ, ಕಮಲಅನಂತರಾಮ್, ಸೋಮಶೇಖರ್, ದಕ್ಷಿಣಾಮೂರ್ತಿ, ಹುಣಸೂರು ಬಸವಣ್ಣ, ಅಭಿರುಚಿ ಗಣೇಶ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು