ಮೈಸೂರು: ಶತಮಾನ ಪೂರೈಸಿರುವ ದಿ ಕೋ ಆಪರೇಟಿವ್ ಬ್ಯಾ೦ಕ್ ನೂತನ ಅಧ್ಯಕ್ಷರಾಗಿ ಸ್ವರೂಪ್ ಎ೦.ಎನ್ ಹಾಗೂ ಉಪಾಧ್ಯಕ್ಷರಾಗಿ ಜೆ.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಹರ್ಷ ರಸ್ತೆಯಲ್ಲಿರುವ ಅತ್ಯಂತ ಹಳೆಯ ಬ್ಯಾಂಕ್ ಆಗಿರುವ ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ನ ಈ ಅವಧಿಯ ಮೂರನೇ ಅಧ್ಯಕ್ಷರಾಗಿ ಆಯ್ಕೆ ಪ್ರಭಾರ ವ್ಯವಸ್ಥಾಪಕ ಎಚ್.ರಾಜಶೇಖರ್ರವರು ನೂತನ ಅಧ್ಯಕ್ಷರಿಗೆ ಹೂ ಗುಚ್ಛ ನೀಡಿದರು ಎಂ. ಎನ್ .ಸ್ವರೂಪ್ ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, 21,262 ಮಂದಿ ಸಂಘದ ಸದಸ್ಯರಿದ್ದಾರೆ. ಅವರೆಲ್ಲರ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಮೂಲಕ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ಈ ಬಾರಿ ಸಂಘದ ಯುವ ಸದಸ್ಯರಿಗೆ ಹೆಚ್ಚಿನ ನೆರವು ನೀಡುವ ಬ್ಯಾ೦ಕ್ ನ ಅಭಿವೃದ್ಧಿ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅಂತೆಯೇ ಹೆಚ್ಚಿನ ಮಂದಿ ಸದಸ್ಯರ ನೋಂದಣಿಗೂ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಉಪಾಧ್ಯಕ್ಷರಾದ ಜೆ.ಕುರುಬಾರಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.