Categories: ಮೈಸೂರು

ಮೈಸೂರು: ಹುಣಸೂರಿನ ಲಕ್ಷ್ಮಣತೀರ್ಥ ನದಿಗೆ ಕೊಳಚೆ ನೀರು, ನದಿ ಸಂರಕ್ಷಣೆಗೆ ಮನವಿ

ಮೈಸೂರು: ರಾಜ್ಯದ ಜೀವನದಿ ಕಾವೇರಿಯ ಉಪನದಿಗಳಲ್ಲಿ ಲಕ್ಷ್ಮಣತೀರ್ಥ ನದಿಯೂ ಒಂದು. ಈ ನದಿಗೆಧಾರ್ಮಿಕ ಇತಿಹಾಸವಿದೆ. ಆದರೆ,  ಹುಣಸೂರು ನಗರದ ಹೃದಯ ಭಾಗದಲ್ಲಿ ಸುಮಾರು ಒಂದು ಕಿಲೋಮೀಟರ್ ಹರಿದು ಹೋಗಿರುವ ಈ ನದಿಗೆ ಕೊಳಚೆ ನೀರು ಬಿಟ್ಟು ನದಿ ಕೊಳೆತು ನಾರುತ್ತಿದೆ ಎಂದು ಸತ್ಯಂ ಎಂಎಎಸ್ ಫೌಂಡೇಷನ್ ಗೌರವಾಧ್ಯಕ್ಷ ಸತ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಮುನಿ ಕಾಡಿನ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಹುಣಸೂರು ನಗರ ಪ್ರವೇಶಿಸುವ ತನಕ ಶುದ್ಧವಾಗಿರುವ  ಲಕ್ಷ್ಮಣತೀರ್ಥ ನದಿ ಹುಣಸೂರು ನಗರ ಪ್ರವೇಶಿಸಿದಾಕ್ಷಣ ಮಲಿನವಾಗಲು ಪ್ರಾರಂಭವಾಗುತ್ತದೆ. ಹುಣಸೂರು ನಗರದ ಹೃದಯ ಭಾಗದಲ್ಲೇ  ಲಕ್ಷ್ಮಣತೀರ್ಥ ನದಿ ಹರಿದರೂ ಈ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಪಕ್ಕದ ತಾಲೂಕು ಕೃಷ್ಣರಾಜನಗರದಿಂದ ಸುಮಾರು ೨೫ ಕಿಲೋಮೀಟರ್ ದೂರದಿಂದ ಕಾವೇರಿ ನದಿ ನೀರನ್ನು ಹುಣಸೂರು ನಗರಕ್ಕೆ ಸರಬರಾಜು ಮಾಡಲಾಗುತ್ತದೆ. ಹುಣಸೂರು ನಗರದ ಹಲವು ಭಾಗಗಳಲ್ಲಿ ಈಗಲೂ ನೀರಿನ ಸಮಸ್ಯೆಯಿದೆ ಎಂದು ವಿವರಿಸಿದರು.

ಹುಣಸೂರು ನಗರದ ಮಧ್ಯೆಯೆ ಲಕ್ಷ್ಮಣತೀರ್ಥ ನದಿ ಹರಿದರೂ ನಗರದ ಕೊಳಚೆ ಚರಂಡಿ ನೀರೆಲ್ಲಾ ನದಿಗೆ ಹರಿದು ವಿಪರೀತ ಸೊಳ್ಳೆಗಳ ಕಾಟ  ಮತ್ತು ಬೇರೆ ಬೇರೆ ರೀತಿಯ ಕಾಯಿಲೆಗಳು ಹರಡಲು ಪ್ರಮುಖ ಕಾರಣವಾಗಿದೆ. ಈ ನದಿ ನೀರು ಮುಂದೆ ಹರಿಯುತ್ತಾ ಕಟ್ಟೆಮಳಲವಾಡಿ ಅಣೆಕಟ್ಟು, ಶಿರೂರು ಅಣೆಕಟ್ಟು, ಮುಖಾಂತರ ಕೃಷ್ಣರಾಜಸಾಗರ ಸೇರುತ್ತದೆ.

ಇದರಿಂದಾಗಿ ಹುಣಸೂರು ನಗರದ ಮುಂದಿನ ಹಳ್ಳಿ, ಊರು, ನಗರದ ಜನರು ಈ ಕೊಳೆತ ಲಕ್ಷ್ಮಣತೀರ್ಥ ನದಿಯ ನೀರನ್ನೇ ಉಪಯೋಗ  ಮಾಡಬೇಕು. ಕೃಷ್ಣರಾಜಸಾಗರ ಅಣೆಕಟ್ಟು ಸೇರುವ ಹುಣಸೂರಿನ ಕೊಳಚೆ ನೀರು ರಾಜಧಾನಿ ಬೆಂಗಳೂರು ಮತ್ತು ಪ್ರಮುಖ ನಗರಗಳಿಗೂ ಕುಡಿಯಲು ಸರಬರಾಜು ಆಗುತ್ತಿದೆ. ಸುಮಾರು ಎರಡು ಕೋಟಿ ಜನರಿಗೆ ಲಕ್ಷ್ಮಣತೀರ್ಥ ನದಿ ನೀರು ಕಾವೇರಿ ನದಿಗೆ ಸೇರ್ಪಡೆಯಾಗಿ ನೀರುಣಿಸುತ್ತಿದೆ. ಅಂದರೆ ಕಲುಷಿತಗೊಂಡಿರುವ ಲಕ್ಷ್ಮಣತೀರ್ಥ ನದಿಯ ನೀರು ಕಾವೇರಿ ನೀರಿನೊಂದಿಗೆ ಬೆರೆತು ಜನರಿಗೆ ಹಲವಾರು ಕಾಯಿಲೆಯಗಳು ಹರಡಲು ಕಾರಣವಾಗಿದೆ ಎಂದು ದೂರಿದರು.

ಕಳೆದ ೨೦ ವರ್ಷಗಳಿಂದ ಆಯ್ಕೆಯಾದ ಶಾಸಕರು ಮತ್ತು ತಾಲೂಕು ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿ ಕೊಳಚೆ  ನೀರು ನದಿಗೆ ಹರಿಯಲು ಬಿಟ್ಟು ಕಣ್ಣುಮುಚ್ಚಿ ಕುಳಿತುಕೊಂಡಿದೆ. ಶಾಸಕರು ಮತ್ತು ತಾಲೂಕು ಆಡಳಿತ ಮಂಡಳಿಯ ನಿರ್ಲಕ್ಷ್ಯ ಬೇಜವಾಬ್ದಾರಿ ಧೋರಣೆಯಿಂದಾಗಿ ಲಕ್ಷ್ಮಣತೀರ್ಥ ನದಿ ಕೊಳೆತು ನಾರುತ್ತಿದೆ. ಹೀಗಾಗಿ ಕಾವೇರಿ ನೀರು ಸೇವಿಸುವ ಎಲ್ಲರೂ ಲಕ್ಷ್ಮಣತೀರ್ಥ ನದಿ ಸಂರಕ್ಷಣೆಯ ಹೋರಾಟ ಮಾಡಬೇಕೆಂದು ಮನವಿ ಮಾಡಿದರು.

ಗ್ರಾ.ಪಂ ಸದಸ್ಯರಾದ ಕುಮಾರ್, ಸಜ್ಜನ್‌ರಾವ್ ಪವಾರ್, ರೈತ ಮುಖಂಡರಾದ ವೆಂಕೋಬರಾವ್ ಜಗತಾಪ್, ಅನಂತೇಗೌಡ ಹಾಜರಿದ್ದರು.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

54 mins ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

1 hour ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

1 hour ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

2 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

3 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

3 hours ago