Categories: ಹಾಸನ

ಬೇಲೂರು: ವಿದ್ಯುತ್ ಸಮಸ್ಯೆ ಬಗೆಹರಿಸದ ಇಂಜಿನಿಯರ್ ರೇವಣ್ಣ ವಿರುದ್ಧ ರೈತರ ಆಕ್ರೋಶ

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ವಿದ್ಯುತ್ ಕೇಂದ್ರ ಇದ್ದು ಬಿಕ್ಕೋಡು ಅರೇಹಳ್ಳಿ ಹೋಬಳಿ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿ ಆಗಿರುವ ರೇವಣ್ಣ ಏನು ಕೆಲಸ ನಿರ್ವಹಿಸುತ್ತಿದ್ದಾರೆ ತಿಳಿಯದು. ಕನಿಷ್ಠ ದಿನಕ್ಕೆ ಹಗಲು ಒಂದು ವ್ಯಾಪ್ತಿಯಲ್ಲಿ ೨೫ ರಿಂದ ೩೦ ಬಾರಿ ವಿದ್ಯುತ್ ತೆಗೆಯುವುದು ಹಾಕುವುದು ಮಾಡುತ್ತಾರೆ ಹೀಗಾದರೆ ರೈತರು ಬೆಳೆಗಳಿಗೆ ಕಾಫಿ ತೋಟಕ್ಕೆ ನೀರನ್ನು ಹಾಯಿಸಲು ಹೇಗೆ ಸಾಧ್ಯ ಒಂದು ದಿನ ಅಥವಾ ಎರಡು ದಿನ ಸಮಸ್ಯೆ ಆದರೆ ಪರವಾಗಿಲ್ಲ. ಆದರೆ ಬಿಕ್ಕೋಡು ಅರೇಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆ ಸರಿಪಡಿಸಲಾಗದ ಅಧಿಕಾರಿಗಳು ವಿದ್ಯುತ್ ಇಲ್ಲವೆಂದು ಲೈನ್ ಮ್ಯಾನ್ ಗಳಿಗೆ ವಿಷಯ ತಿಳಿಸಿದರೆ ಅಲ್ಲಿ ಜಂಪ್ ಹೋಗಿದೆ, ಇಲ್ಲಿ ಜಂಪ್ ಹೋಗಿದೆ ಎಂದು ಸಭಾಭೂ ಉತ್ತರ ನೀಡುತ್ತಾರೆ ಮತ್ತು ಲೋಡ್ ಸೆಡ್ಡಿಂಗ್ ಇದೆ ಎಂದು ಕಾಗಕ್ಕ ಗೂಬಕ್ಕನ ಕಥೆ ಹೇಳಲು ಶುರು ಮಾಡಿದ್ದಾರೆ.

ಈ ರೀತಿ ಆದರೆ ರೈತ ಬೆಳೆದ ಬೆಳೆಗಳು ಬಿಸಿಲಿನ ತಾಪಕ್ಕೆ ಸುಟ್ಟು ಕರಕಾಲಗುತ್ತಿವೆ ಇವುಗಳು ಯಾವುದು ತಿಳಿಯದಂತೆ ವರ್ತಿಸುತ್ತಿರುವ ಕೆಇಬಿ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಬೇರಡೆ ವರ್ಗಾವಣೆ ತೆಗೆದುಕೊಂಡು ಹೋಗಬೇಕು ಇಲ್ಲದಿದ್ದಲ್ಲಿ ರೈತರಿಗೆ ಸರಿಯಾಗಿ ವಿದ್ಯುತ್ ಅನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉದಾಹರಣೆ ಅಂಕಿಹಳ್ಳಿ ( ಶಾಂತನಹಳ್ಳಿ ) ಟ್ರಾನ್ಸ್ಫರೆಂಟ್ ಪೆಟ್ಟಿಗೆ ಸುಟ್ಟು ಹೋಗಿದೆ ಹಲವು ಬಾರಿ ರಿಪೇರಿ ಮಾಡಿಸಲಾಗಿದೆ ದಿನಕ್ಕೆ ೨ ರಿಂದ ೩ ಬಾರಿ ಜಂಪ್ ಹೋಗುತ್ತಿರುತ್ತದೆ .ಇದು ಯಾವುದನ್ನು ಸರಿಪಡಿಸದಿರುವ ಅಧಿಕಾರಿಗಳು ಈ ಭಾಗದ ರೈತರು ಇಡಿ ಶಾಪ ಹಾಕುತ್ತಿದ್ದಾರೆ.

ಈ ಬಾರಿ ಸರಿಯಾಗಿ ವಿದ್ಯುತ್ ನೀಡದೆ ಕಾಫಿ ಗಿಡಗಳಿಗೆ ನೀರು ಹಾಯಿಸಲು ಆಗದೆ ಕಾಫಿ ತೋಟದ ಮಾಲೀಕರು ಕಾಫಿ ಗಿಡಗಳು ಸುಟ್ಟು ಹೋದ ಕಾರಣ ಕೆಇಬಿ ಅಧಿಕಾರಿಗಳಿಗೆ ಧಿಕ್ಕಾರ ಹಾಕುತ್ತಾ ಸಮಸ್ಯೆ ಯಾವಾಗ ಬಗೆಹರಿಸುತ್ತಾರೆ ತಿಳಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಅತಿ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸದಿದ್ದರೆ ಇನ್ನು ಒಂದು ವಾರದೊಳಗೆ ಅರೇಹಳ್ಳಿ ವಿದ್ಯುತ್ ಕೇಂದ್ರದ ಮುಂದೆ ಧರಣಿಕೂರಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Gayathri SG

Recent Posts

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

13 mins ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

1 hour ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

1 hour ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

1 hour ago

ಹೆಸ್ಕಾಂ ಲೈನ್ ಮೆನ್ ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ…

1 hour ago

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

2 hours ago